ಪಾರ್ವತಿ ಜಿ ಐತಾಳ್ ಅವರ ನಾಟಕ ಕೃತಿ ಬಿಡುಗಡೆ

ಉಡುಪಿ : ಇಲ್ಲಿನ ಪ್ರತಿಷ್ಠಿತ ನಾಟಕ ಸಂಸ್ಥೆ ರಂಗಭೂಮಿಯ 44ನೆಯ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯ ಆರನೆಯ ದಿನ ರಂಗಾಸಕ್ತ ಪ್ರೇಕ್ಷಕರ ಸಮ್ಮುಖದಲ್ಲಿ ಖ್ಯಾತ ಲೇಖಕಿ ಪಾರ್ವತಿ ಜಿ.ಐತಾಳ್ ಅವರ ‘ಮಹಾಬೆಳಗು ಮತ್ತು ಇತರ ನಾಟಕಗಳು’ ಎಂಬ ಕೃತಿಯನ್ನು ರಂಗಭೂಮಿಯ ಅಧ್ಯಕ್ಷ ರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ, ಜೊತೆ ಕಾರ್ಯದರ್ಶಿ ಶ್ರೀಪಾದ ಹೆಗಡೆ,ಮತ್ತು ನಾಟಕ ಸ್ಪರ್ಧೆಯ ತೀರ್ಪುಗಾರರಾದ ಎಂ.ಎಸ್.ಭಟ್, ಲಕ್ಷ್ಮಿನಾರಾಯಣ ಭಟ್ಟ, ಶ್ರೀನಿವಾಸ ಭಾಗ್ವತ್ , ಸತೀಶ್ ತಿಪಟೂರು ಮತ್ತು ವಿನಾಯಕ ಭಟ್ ಹಾಸನಿಗಿ ಬಿಡುಗಡೆಗೊಳಿಸಿ ಕೃತಿಗೆ ಶುಭ ಹಾರೈಸಿದರು. ಕೃತಿಕಾರ್ತಿ ಪಾರ್ವತಿ ಐತಾಳ್ ನಾಟಕಗಳ ಹಿನ್ನೆಲೆಯನ್ನು ವಿವರಿಸಿ ಕೃತಿಯನ್ನು ಪರಿಚಯಿಸಿದರು. ಅಧ್ಯಕ್ಷರು, ಲೇಖಕಿಯವರನ್ನು ಅಭಿನಂದಿಸಿ ಶಾಲು ಹೊದೆಸಿ ಸನ್ಮಾನಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply