ದೈವಸ್ಥಾನಗಳನೇಮೋತ್ಸವ, ದರ್ಶನಕ್ಕೆ ಅನುಮತಿ 

        ದರ್ಶನ, ನೇಮೋತ್ಸವಕ್ಕೆ  ಅನುಮತಿ ಕೊಡುವಂತೆ ದೈವಾರಾಧಕರ ಮನವಿ 

ಕೊರೋನಾದಿಂದಾಗಿ ಉಡುಪಿ ಜಿಲ್ಲೆಯಲ್ಲಿ ಸ್ಥಗಿತಗೊಳಿಸಲಾಗಿರುವ ದೈವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳನ್ನು ಆರಂಭಿಸಲು ಅನುಮತಿ ನೀಡುವಂತೆ,ಜಿಲ್ಲೆಯ ಸಮಸ್ತ ದೈವ ಚಾಕ್ರಿ ವರ್ಗದವರ ಪರವಾಗಿ ಉಡುಪಿ ಜಿಲ್ಲಾ ತುಳುನಾಡ ದೈವಾರಾಧಕೆರ್ನ ಸಹಕಾರ ಒಕ್ಕೂಟದ ವತಿಯಿಂದ ಕಾಪು ಶಾಸಕ ಲಾಲಾಜಿ ಮೆಂಡನ್ ಅವರಿಗೆ ಮನವಿ ನೀಡಲಾಯಿತು

ದೈವ ಚಾಕ್ರಿ ವರ್ಗದವರ ಜೀವನೋಪಾಯಕ್ಕೆ ಕಷ್ಟವಾಗಿದೆ. ಸರ್ಕಾರದಿಂದ ಸವಲತ್ತುಗಳನ್ನು ಒದಗಿಸಿಕೊಡಬೇಕು ಹಾಗೂ ಕೊರೋನದ ತುರ್ತು ಸಂದರ್ಭದಲ್ಲಿ 150 ಜನರು ಭಾಗವಹಿಸುವುದಕ್ಕೆ ಅವಕಾಶ ಮಾಡಿಕೊಟ್ಟು  ದೈವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮ, ನೇಮೋತ್ಸವ, ಮಾರಿಪೂಜೆ, ದರ್ಶನ ಸೇವೆ ಇತ್ಯಾದಿಗಳನ್ನು ನಡೆಸುವುದಕ್ಕೆ  ಅನುಮತಿ ದೊರಕಿಸಬೇಕು ಎಂದು ಆಗ್ರಹಿಸಲಾಗಿದೆ.

ಮನವಿಯನ್ನು ಸ್ವೀಕರಿಸಿದ ಶಾಸಕರು, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಯವರಲ್ಲಿ ಚರ್ಚೆಸುತ್ತೇನೆ  ಎಂದು ಭರವಸೆ ನೀಡಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ರಾಘವ ಸೇರಿಗಾರ್, ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಾಧಿಕಾರಿ ಶ್ರೀಧರ್ ಪೂಜಾರಿ, ಕ್ರೀಡಾ ಕಾರ್ಯದರ್ಶಿ ದಯೇಶಾ ಕೋಟ್ಯಾನ್, ಉಪಾಧ್ಯಕ್ಷರಾದ ಮಾಧವ ಪಂಬದ, ಸತೀಶ್ ಪೂಜಾರಿ ಒಕ್ಕೂಟದ ಕಾಪು ಘಟಕದ ಅಧ್ಯಕ್ಷ ಯಶೋಧರ್ ಶೆಟ್ಟಿ ಉಪಸ್ಥಿತರಿದ್ದರು.

​,​
 
 
 
 
 
 
 
 
 
 
 

Leave a Reply