ಮಣಿಪಾಲ ಆರೋಗ್ಯ ಕಾರ್ಡ್ ವಿತರಣೆ ಹಾಗೂ ವಿಕಲ ಚೇತನರಿಗೆ ಆರ್ಥಿಕ ಸಹಾಯ ಕಾರ್ಯಕ್ರಮ

ಆದಿತ್ಯ ಟ್ರಸ್ಟ್ (ರಿ ), ನಕ್ರೆ, ಕಾರ್ಕಳ, ಶ್ರೀ ವರದರಾಜ್ ಭಟ್ ಮಂಗಳೂರು, ರೋಟರಿ ಕ್ಲಬ್ ಕಲ್ಯಾಣ ಪುರ ಉಡುಪಿ, ಶ್ರೀಮತಿ ಲಕ್ಷೀ ಭಟ್, ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ವಿತರಣೆ, ವಿಕಲ ಚೇತನರಿಗೆ ಆರ್ಥಿಕ ಸಹಾಯ ಕಾರ್ಯಕ್ರಮವು ಆರೋಗ್ಯ ಉಪ ಕೇಂದ್ರ, ದುರ್ಗಾ ನಗರ, ಕಾರ್ಕಳ ಇಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಶಶಿಕಲಾ, ಉಪಾಧ್ಯಕ್ಷೆ, ಕುಕ್ಕುಂದೂರು ಗ್ರಾಮ ಪಂಚಾಯತ್ ಇವರು ವಹಿಸಿದ್ದರು. ಇವರು ಮಾತನಾಡುತ್ತ, ಸಮಾಜದಲ್ಲಿರುವ ಅಶಕ್ತ, ವಿಕಲ ಚೇತನರನ್ನು ಗುರುತಿಸಿ ಅವರಿಗೆ ಅಗತ್ಯವಾದ ಆರ್ಥಿಕ ಸಹಾಯ, ದೈಹಿಕ ಚಿಕಿತ್ಸೆ, ಸಾಧನ ಸಲಕರಣೆ, ಆರೋಗ್ಯ ಕಾರ್ಡ್, ಮುಂತಾದವುಗಳನ್ನು ದೊರಕಿಸಿ ಕೊಡುವಲ್ಲಿ ಆದಿತ್ಯ ಟ್ರಸ್ಟ್ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ಪಂಚಾಯತ್ ವತಿಯಿಂದ ಟ್ರಸ್ಟಿನ ಎಲ್ಲ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು. ರೋ. ದಿವಾಕರ್, ಅಧ್ಯಕ್ಷರು, ರೋಟರಿ ಕ್ಲಬ್ ಕಲ್ಯಾಣಪುರ ಉಡುಪಿ, ಇವರ ಪ್ರಾಯೋಜಕತ್ವದಲ್ಲಿ ಮಾ. ಪೂರ್ವಿಕ್, ಇವರು ವಾಕ್ – ಶ್ರವಣ ದೋಷ ಹೊಂದಿದ್ದು ಇವರ ವಾಕ್ ಚಿಕಿತ್ಸೆ ತರಬೇತಿಗೆ, ಶ್ರೀ ರಾಘು ನಾಯ್ಕ್ ಹಾಗೂ ಶ್ರೀಮತಿ ಸೌಮ್ಯ ಇವರು ಅಶಕ್ತರಾಗಿದ್ದು ಇವರ ದೈಹಿಕ ಚಿಕಿತ್ಸೆ ಗಾಗಿ ಆರ್ಥಿಕ ಸಹಾಯ ನೀಡಿದರು. ಶ್ರೀ ವರದರಾಜ್ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಹದಿಮೂರು ಮಂದಿ ಆಶಾ ಕಾರ್ಯಕರ್ತೆಯರಿಗೆ ಮತ್ತು ಹನ್ನೆರಡು ಮಂದಿ ವಿಕಲ ಚೇತನ ಅಶಕ್ತ ಬಂಧುಗಳಿಗೆ ಎರಡು ವರ್ಷಗಳ ಅವಧಿಗೆ ಮಣಿಪಾಲ ಆರೋಗ್ಯ ಕಾರ್ಡನ್ನು ವಿತರಿಸಲಾಯಿತು. ಶ್ರೀಮತಿ ಸಂಪಾ, ಆಶಾ ಕಾರ್ಯಕರ್ತೆ ಕುಕ್ಕುಂದೂರು, ಆರೋಗ್ಯ ಇಲಾಖೆಯಲ್ಲಿ ಇವರ ಸೇವೆಯನ್ನು ಪರಿಗಣಿಸಿ ಫಲ, ಪುಷ್ಪ, ಶಾಲು ಗೌರವ ಧನವನ್ನು ನೀಡಿ ಸನ್ಮಾನಿಸಲಾಯಿತು. ಶ್ರೀ ದಿನೇಶ್ ನಾಯ್ಕ್ ಬೆಳುವಾಯಿ, ಸಂಪನ್ಮೂಲ ಸಂಯೋಜಕರು, ಸ್ಪೆಕ್ಟ್ರಮ್ ಮಣಿಪಾಲ ಇವರು ಆದಿತ್ಯ ಟ್ರಸ್ಟಿಗೆ ಕೊಡಮಾಡಿದ ಸ್ಟೀಲ್ ಡ್ರಮ್ ನ್ನು ಕೃತಜ್ಞತಪೂರ್ವಕವಾಗಿ ಸ್ವೀಕರಿಸಲಾಯಿ. ಆದಿತ್ಯ ಟ್ರಸ್ಟಿನ ಅಧ್ಯಕ್ಷ ಶ್ರೀ ಮಂಜುನಾಥ ತೆಂಕಿಲ್ಲಾಯ ಮಾತನಾಡುತ್ತ, ಆರೋಗ್ಯ ಮಾನವನ ಬದುಕಿನಲ್ಲಿ ಹೆಚ್ಚು ಮಹತ್ವಪೂರ್ಣವಾದದ್ದು. ಉತ್ತಮವಾದ ಆರೋಗ್ಯದಿಂದ ಸ್ವಸ್ತ ಸಮಾಜನಿರ್ಮಾಣ ಸಾಧ್ಯ. ಗಾಮೀಣ ಭಾಗದಲ್ಲಿ ಮನೆಗಳಿಗೆ ಭೇಟಿ ನೀಡಿ ಜನರ ಆರೋಗ್ಯದ ಮೇಲ್ವಿಚಾರಣೆ, ರೋಗ ನಿವಾರಣೆಗೆ ಸಂಬಂಧಿಸಿದಂತೆ ಮಾಹಿತಿ, ಸಲಹೆ, ಸೂಚನೆ ಗಳನ್ನು ನೀಡುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ. ಅವರು ಆರೋಗ್ಯವಂತರಾಗಿದ್ದರೆ ಹೆಚ್ಚಿನ ಸೇವೆ ನೀಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಅವರಿಗೂ ಮಣಿಪಾಲ ಆರೋಗ್ಯ ಕಾರ್ಡಿನ ಅವಶ್ಯಕತೆ ಮನಗಂಡು ವಿತರಿಸಿದ್ದೇವೆ ಎಂದರು. ರೋ. ಶಿಶಿರ್ ಶೆಟ್ಟಿ ಜಾರ್ಕಳ,ರೋಟರಿ ಕ್ಲಬ್ ಕಲ್ಯಾಣಪುರ ಉಡುಪಿ, ಶ್ರೀ ಸುಕುಮಾರ್,ಕಾರ್ಯದರ್ಶಿ, ಶಾಂತಿ ಯುವಕ ವೃಂದ, ಶ್ರೀ ಉದಯ ಮಲ್ಪೆ, ಉದ್ಯಮಿ, ಶ್ರೀ ರಾಜೇಶ್ ಶೆಟ್ಟಿ, ಸದಸ್ಯ, ಕುಕ್ಕುಂದೂರು ಗ್ರಾಮ ಪಂಚಾಯತ್, ಕು. ಅನಿತಾ ಮತ್ತು ಕು. ಸ್ವಾತಿ ಸುಶ್ರುಶಿಕಿಯರು, ಆರೋಗ್ಯ ಉಪಕೇಂದ್ರ, ಕುಕ್ಕುಂದೂರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟಿನ ಹಿತೈಷಿ ಶ್ರೀ ಅಶೋಕ್ ಇವರು ಅಭ್ಯಾಗತರನ್ನು ಸ್ವಾಗತಿಸಿದರು. ಶ್ರೀ ರಮೇಶ್ ನಕ್ರೆ ಕಾರ್ಕಳ ಇವರು ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply