ಆರೋಗ್ಯವಂತ ಪ್ರಜೆಗಳೇ ದೇಶದ ದೊಡ್ಡ ಸಂಪತ್ತು –ಸದಾನಂದ ಸಾಲ್ಯಾನ್

ಹಳೆವಿದ್ಯಾರ್ಥಿ ಸಂಘ,ಯುವಕ ಸಂಘ ಕೊಡವೂರು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಕಂಪಾನಿಯೋ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ಫೂಟ್ ಪಲ್ಸ್ ತೆರಪಿಯ ಸಮಾರೋಪ ಸಮಾರಂಭ ಡಿ.4 ರಂದು ಯುವಕ ಸಂಘದಲ್ಲಿ ಜರುಗಿತು.ಮುಖ್ಯ ಅತಿಥಿ ಕನ್ಸಲ್ಟಿಂಗ್ ಇಂಜಿನಿಯರ್ & ಕಂಟ್ರಾಕ್ಟರ್ ಸದಾನಂದ ಸಾಲ್ಯಾನ್ ಮಾತನಾಡಿ ಔಷಧಿಗಳನ್ನು ಸೇವಿಸದೆ ನಿರಂತರ ಪ್ರಯತ್ನದಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಇಂತಹ ಆರೋಗ್ಯ ‌ಶಿಬಿರಗಳು ಸಹಕಾರಿಯಾಗಿದೆ.ಆರೋಗ್ಯವಂತ ಪ್ರಜೆಗಳೇ ದೇಶದ ದೊಡ್ಡ ಸಂಪತ್ತು ಎಂದರು.ಹಾಗೆಯೇ ಯುವ ಜನತೆ ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದರು.

ಕಂಪಾನಿಯೋ ಸಂಸ್ಥೆಯ ದಕ್ಷಿಣ ಭಾರತದ ಮುಖ್ಯಸ್ಥ ಸೀತಾರಾಮ ಶೆಟ್ಟಿಯವರು ಮಾತನಾಡಿ ವೈದ್ಯಕೀಯ ವಿಜ್ಞಾನದಲ್ಲಿ ಸೂಕ್ತವಾದ ಜೌಷದಿಗಳಿಲ್ಲದ ಹಲವಾರು ಕಾಯಿಲೆಗಳನ್ನು ಫೂಟ್ ಪಲ್ಸ್ ತೆರಪಿಯಿಂದ ಗುಣಪಡಿಸ ಕೊಳ್ಳಬಹುದು ಎಂದರು. ಸಾಮಾಜಿಕ ಮುಂದಾಳು ಹಿರಿಯಣ್ಣ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.

ನಗರಸಭಾ ಸದಸ್ಯ ವಿಜಯ ಕೊಡವೂರು, ಮತ್ಸ್ಯೋದ್ಯಮಿ ಸುಧಾಕರ್ ಕುಂದರ್ , ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ದೇವಾಡಿಗ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ಉಪಸ್ಥಿತರಿದ್ದರು. ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೋಟ್ಯಾನ್ ಸ್ವಾಗತಿಸಿದರು.ಕಂಪಾನಿಯೋ ಸಂಸ್ಥೆಯ ಜಯಪ್ರಕಾಶ್ ನಿರೂಪಿಸಿ ವಂದಿಸಿದರು

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply