ಹಿರಿಯ ಪತ್ರಕರ್ತ ಹಾಗೂ ಹರಿದಾಸರಾದ ಬಿಸಿ ರಾವ್ ಶಿವಪುರ ದಂಪತಿಗಳಿಗೆ ಸನ್ಮಾನ

ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಹಿರಿಯ ಪತ್ರಕರ್ತ ಹಾಗೂ ಹರಿದಾಸರಾದ ಬಿಸಿ ರಾವ್ ಶಿವಪುರ ದಂಪತಿಗಳನ್ನು ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಪಾಂಡುಕಲ್ಲು ದೇವಾಲಯದ ಗುರುಪಾದ ಸ್ವಗೃಹದಲ್ಳಿ ಶನಿವಾರ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಹಿರಿಯ ಪತ್ರಕರ್ತ ಬಿಸಿರಾವ್ ಶಿವಪುರ ಮಾತನಾಡಿ ” ಪತ್ರಕರ್ತರು ಎಲ್ಲಾ ಸಮಾಜದ ಪ್ರತಿಭೆಗಳನ್ನು ಸಮಸ್ಯೆಗಳನ್ನು ಗುರುತಿಸುವ ಕೆಲಸ ಮಾಡುತಿದ್ದಾರೆ. ಅಂಕುಡೊಂಕು ಗಳನ್ನು ತಿದ್ದಿ ಸರಿಪಡಿಸುವ ಕಾರ್ಯ ಪತ್ರಕರ್ತರಿಂದ ನಡೆಯುತ್ತಿದೆ. ಹಿರಿಯ ಪತ್ರಕರ್ತರ ನ್ನು ಗುರುತಿಸಿ ಗೌರವಿಸುವ ವಿಷಯ ಹೆಮ್ಮೆಯ ಸಂಗತಿ ಯಾಗಿದೆ ಎಂದರು. ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೆ ಸಂದರ್ಭದಲ್ಲಿ ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್, ಹೆಬ್ರಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುಕುಮಾರ್ ಮುನಿಯಾಲು, ಜಿಲ್ಲಾ ಸದಸ್ಯ ಉದಯ ಮುಂಡ್ಕೂರು, ಪತ್ರಕರ್ತರ ಸಂಘದ ಸದಸ್ಯ ರಾದ , ಶ್ರೀ ದತ್ತ ಹೆಬ್ರಿ, ರಾಂ ಅಜೆಕಾರು, ಕೆ ಎಂ ಖಲೀಲ್, ಜಗದೀಶ್ ಅಂಡಾರು, ಸತೀಶ್ ಶೆಟ್ಟಿ, ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply