ಸಂಗೊಳ್ಳಿ ರಾಯಣ್ಣ ಹುತಾತ್ಮ ಮಾಲಾ ಅಭಿಯಾನ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ನೇತ್ರತ್ವದಲ್ಲಿ ಹುತಾತ್ಮ ಮಾಲಾ ಅಭಿಯಾನ ನಡೆಯಿತು.

3ನೆ ವರ್ಷದ ಹುತಾತ್ಮ ಮಾಲಾ ಅಭಿಯಾನದ ಅಂಗವಾಗಿ ಇಂದು ರಾಯಣ್ಣನ ಸಮಾಧಿಗೆ ಪೂಜೆ ಸಲ್ಲಿಸಿ ಗಲ್ಲಿಗೇರಿಸಿದ ಸ್ಥಳದ ವರೆಗೆ ನಡೆದ ಪಾದ ಯಾತ್ರೆಯಲ್ಲಿ ಪೂಜ್ಯನೀಯ ಗುರುಗಳಾದ ಶ್ರೀ ಶ್ರೀ ಸಿದ್ದೇಶ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸುರೇಶ್ ಗೋಕಾಕ್ ಮತ್ತು ಬಳಗದವರು,  ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಮತ್ತು ಬಳಗದವರು ಮತ್ತು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ನೂರಾರು ರಾಯಣ್ಣ ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಸಿದರ.

  • ಈ ಸಂದರ್ಬದಲ್ಲಿ ಮಾತನಾಡಿದ ಸುರೇಶ್ ಗೋಕಾಕ್ ಅವರು ನಮ್ಮ 3ನೇಯ ವರ್ಷದ ಹುತಾತ್ಮ ಮಾಲಾ ಅಭಿಯಾನ ಯಶಸ್ವಿಯಾಗಿದೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸ್ಪಂದನೆ ವ್ಯಕ್ತ ವಾಗಿದೆ, 1 ಲಕ್ಷಕ್ಕೂ ಹೆಚ್ಚು ಜನರು ಸಾಮಾಜಿಕ ಜಾಲತಾಣದ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಮತ್ತು ನೂರಾರು ಅಭಿಮಾನಿಗಳು ಪಾದ ಯಾತ್ರೆ ಯಲ್ಲಿ ಪಾಲ್ಗೊಂಡಿದ್ದು ಹೆಮ್ಮೆ ಎನಿಸುತ್ತದೆ.

ಮುಂದಿನ ದಿನಗಳಲ್ಲಿ ಸಾವಿರಾರು ಅಭಿಮಾನಿ ಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡು ಕಾರ್ಯ ಕ್ರಮವನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಯಶಸ್ವಿ ಗೊಳಿಸೇಕೆಂದು ಕರೆ ನೀಡಿದರು.

ರಾಯಣ್ಣ ಅಭಿವೃದ್ದಿ ಪ್ರಾಧಿಕಾರದ ಪ್ರಮುಖರಾದ ಶoಕ್ರಣ್ಣ ಈ ಗಳಿಗೆಯಲ್ಲಿ ಶುಭ ಕೋರಿದರು.
ಅಭಿಮಾನಿ ಬಳಗದ ಸಚಿನ್ ಗಾಣಿಗೇರ ಅವರು ಸ್ವಾಗತಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply