ಉಡುಪಿ : ಮತ ಎಣಿಕೆ ಕೇಂದ್ರಕ್ಕೆ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಭೇಟಿ

ಉಡುಪಿ : ಕರ್ನಾಟಕ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರು ನಗರದ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ವಿದ್ಯಾಸಂಸ್ಥೆಯ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸೈಂಟ್ ಸಿಸಿಲೀಸ್ ವಿದ್ಯಾಸಂಸ್ಥೆಯಲ್ಲಿ ಮತಯಂತ್ರಗಳನ್ನು ಭದ್ರತೆಯಲ್ಲಿ ಇಟ್ಟಿರುವ ಸ್ಟಾçಂಗ್ ರೂಂ, ಸಿ.ಸಿ.ಟಿ.ವಿ ಕ್ಯಾಮೆರಾಗಳ ವೀಕ್ಷಣಾ ಕೇಂದ್ರ, ವಿವಿಧ ಹಂತಗಳಲ್ಲಿ ಭದ್ರೆತಯನ್ನು ಒದಗಿಸಿರುವ ಪೋಲೀಸರ ಪಹರೆ ಸೇರಿದಂತೆ ಮತ್ತಿತರ ಭದ್ರತೆಯ ಬಗ್ಗೆ
ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಮತ ಎಣಿಕೆಗೆ ನಡೆಸಿರುವ ಪೂರ್ವ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯಿಂದ ಮಾಹಿತಿ ಪಡೆದ ಅವರು ಪ್ರತೀ ಎರಡು ಮತ ಎಣಿಕೆ ಟೇಬಲ್‌ಗೆ ಸಿ.ಸಿ.ಟಿ.ವಿ ಅಳವಡಿಕೆ ಆಗಬೇಕು ಹಾಗೂ ಮಹಡಿಗಳ ಮೇಲೆ ಮತ ಎಣಿಕೆ ಕೇಂದ್ರಗಳ ಮೆಟ್ಟಿಲುಗಳಿಗೂ ಸಿ.ಸಿ.ಟಿ.ವಿ ಅಳವಡಿಸುವಂತೆ ಸೂಚನೆ ನೀಡಿದರು.
ಐ.ಜಿ.ಪಿ ಬೋರಲಿಂಗಯ್ಯ, ಎಸ್.ಪಿ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply