ಫ್ಯಾಟಿ ಲಿವರ್ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ  

ಆದರ್ಶ ಆಸ್ಪತ್ರೆ ಉಡುಪಿ ಇದರ ವತಿಯಿಂದ ಆಸ್ಪತ್ರೆಯಲ್ಲಿ  ಫ್ಯಾಟಿ ಲಿವರ್ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಿಮಲ ಚಂದ್ರಶೇಖರ್ ಹಾಗೂ ಆದರ್ಶ ಆಸ್ಪತ್ರೆಯ ಯಕೃತ್ತು ಹಾಗೂ ಕರಳು ಸಂಬಂಧಿ ರೋಗಗಳ ತಜ್ಞರಾದ ಡಾ. ಸತೀಶ್ ಕೆ. ನಾಯಕ್ ಹಾಗೂ ಸ್ತ್ರೀರೋಗ ತಜ್ಞರಾದ ಡಾ. ರಂಜಿತಾ ಎಸ್. ನಾಯಕ್ ಅವರು ಉದ್ಘಾಟಿಸಿದರು.
ಬಳಿಕ  ಮಾತನಾಡಿದ ಡಾ. ಸತೀಶ್ ಕೆ. ನಾಯಕ್ ಅವರು ಲಿವರ್ ನ ಮಹತ್ವ, ಫ್ಯಾಟಿ ಲಿವರ್ ನಿಂದ ಆಗುವ ದುಷ್ಪರಿಣಾಮಗಳು, ಹಾಗೂ ಆಹಾರ ಪದ್ದತಿ , ವ್ಯಾಯಾಮದ ಮಹತ್ವವನ್ನು ತಿಳಿಸಿದರು. ಡಯಟಿಷನ್ ಅನುಶ್ರೀ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು
 
 
 
 
 
 
 
 
 
 
 

Leave a Reply