ವಿಶ್ವ ಪರಿಸರ ದಿನದ ಅಂಗವಾಗಿ ಮಿಷನ್ ಆಸ್ಪತ್ರೆಯಲ್ಲಿ ಬೃಹತ್ ಗಿಡ ನೆಡುವ ಅಭಿಯಾನ

ವಿಶ್ವ ಪರಿಸರ ದಿನದ ಅಂಗವಾಗಿ ಮಿಷನ್ ಆಸ್ಪತ್ರೆ ಆವರಣದಲ್ಲಿ ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಮಲಬಾರ್ ಗೋಲ್ಡ್, ಸುವಣ೯ ಎಂಟರ್ಪ್ರೈಸಸ್ ಬ್ರಹ್ಮಾವರ, ವೈದ್ಯಕೀಯ ಪ್ರತಿನಿಧಿಗಳ ಸಂಘಹಾಗೂ ಜನ ಔಷಧಿ ಕೇಂದ್ರ ಇದರ ವತಿಯಿಂದ ಬೃಹತ್ ಗಿಡ ನೆಡುವ ಅಭಿಯಾನ ನಡೆಯಿತು.

ವಲಯ ಅರಣ್ಯಾಧಿಕಾರಿ ಸುರೇಶ ಗಾಣಿಗ ಮಾತನಾಡಿ, ಗಿಡಗಳನ್ನು ನೆಟ್ಟು ಬೆಳೆಸಬೇಕು ಅರಣ್ಯಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ವಾತಾವರಣದಲ್ಲಿ ಬದಲಾವಣೆಯಾಗುತ್ತಿದೆ ಹೀಗಾಗಿ ಕಾಡು ಬೆಳೆಸಬೇಕಾದ ಅನಿವಾಯ೯ತೆ ಇದೆ ಎಂದರು.

ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು , ಅರಣ್ಯ ಇಲಾಖೆ ಸಹಕಾರದಿಂದ ಸುಮಾರು 5 ಸಾವಿರ ಗಿಡ ನೆಡುವ ಅಭಿಯಾನ ನಡೆಯುತ್ತಿದೆ ಎಂದರು.

ಈ ಸಂದಭ೯ದಲ್ಲಿ ಮಲಬಾರ್ ಗೋಲ್ಡ್ ನ ರಾಘವೇಂದ್ರ ಅಜೆಕಾರು, ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ, ರಾಘವೇಂದ್ರ ಕವಾ೯ಲು, ಕಾಯ೯ದಶಿ೯ ಮಿಲ್ಟನ್ ಒಲಿವರ್, ನಸಿ೯oಗ್ ಕಾಲೇಜಿನ ಪ್ರಾಂಶುಪಾಲೆ ಡಾ| ಸುಜಾ ಕಕ೯ಡ, ವೀಣಾ ಮಿನೇಜಸ್, ಎಚ್.ಆರ್ ಲಿಯೋನ, ಅಶೋಕ್ , ಸದಾನಂದ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply