ಉಡುಗೊರೆಯಾಗಿ ಸಿಕ್ಕಿದ್ದಂತೆ ರೋಹಿಣಿ ಸಿಂಧೂರಿಗೆ ಮೈಸೂರು ಡಿಸಿ ಪೋಸ್ಟ್

ಮೈಸೂರು- ಮೈಸೂರಿನ ಡಿಸಿ ರೋಹಿಣಿಯವರಿಗೆ ಅಧಿಕಾರ ಸಿಕ್ಕಿದು ಉಡುಗೊರೆಯಾಗಿ ಎಂಬ ತೀವ್ರ ಆರೋಪ ಕೇಳಿಬಂದಿದೆ. ತಿರುಪತಿಯಲ್ಲಿ ಹೊಸತಾಗಿ ನಿರ್ಮಿಸುತ್ತಿರುವ ಯಾತ್ರಿ ಭವನಕ್ಕಾಗಿ ಕರ್ನಾಟಕದ 200 ಕೋಟಿ ರೂಪಾಯಿ ಕೊಟ್ಟಿದ್ದು ಅದರ ಬದಲಾಗಿ ರೋಹಿಣಿ ಸಿಂಧೂರಿ ಅವರಿಗೆ ಮೈಸೂರಿನ ಜಿಲ್ಲಾಧಿಕಾರಿಯ ಪೋಸ್ಟ್ ನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪ ಮಾಡಿದ್ದಾರೆ.

ಯಾತ್ರಿ ನಿವಾಸ ನಿರ್ಮಿಸುತ್ತಿರುವ ಸ್ಥಳ ನಮ್ಮದು, ವ್ಯಯಿಸುವ ದುಡ್ಡು ನಮ್ಮದು. ಆದರೆ ಸಂಕೀರ್ಣದ ಕಂಟ್ರಾಕ್ಟರ್ ಮತ್ತು ಡಿಸೈನರ್ ಮಾತ್ರ ಆಂಧ್ರ ಪ್ರದೇಶದವರು. ಯಾಕೆ, ಅದನ್ನು ನಿರ್ಮಿಸಲು ನಮ್ಮ ಲೋಕೋಪಯೋಗಿ ಇಲಾಖೆಯೇ ಇರಲ್ಲಿಲ್ಲವೇ, ನಮ್ಮ ರಾಜ್ಯದ ವಿನ್ಯಾಸಗಾರರೇ ಇರಲಿಲ್ಲವೇ ಎಂದು ಸಾ.ರಾ.ಮಹೇಶ್ ಪ್ರಶ್ನೆಯೆತ್ತಿದ್ದಾರೆ.

ನಮ್ಮಲ್ಲೆ ಬಹಳಷ್ಟು ವಿನ್ಯಾಸಗಾರರಿದ್ದರೂ ಆಂಧ್ರ ಮೂಲದ ಮೆಸರ್ಸ್ ಗಾಯತ್ರಿ ಅಂಡ್ ನಮಿತ್ ಆರ್ಕಿಟೆಕ್ಟ್ ಕಂಪನಿಗೆ 10 ಕೋಟಿ ನೀಡಿ ವಿನ್ಯಾಸದ ಹೊಣೆ ನೀಡಲಾಗಿದೆ.ಅದರ ಹಿಂದಿನ ಉದ್ದೇಶವೇನು ಎಂಬ ಮತ್ತೊಂದು ಪ್ರಶ್ನೆ ಕೇಳಿದ್ದಾರೆ. ಆ ಸಮಯದಲ್ಲಿ ಧಾರ್ಮಿಕ ದತ್ತಿ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿ ಅವರು ಸರ್ಕಾರದ ನಿಯಮಗಳನ್ನು ಪಾಲಿಸದೆ ಅವರ ಇಷ್ಟಕ್ಕೆ ತಕ್ಕಂತೆ ವರ್ತಿಸಿದ್ದಾರೆ. ಕರ್ನಾಟಕದ ಕೋಟ್ಯಾಂತ ರೂಪಾಯಿ ಹಣವನ್ನು ಆಂಧ್ರ ಪ್ರದೇಶಕ್ಕೆ ಸುರಿದ ಕಾರಣಕ್ಕೆ ರೋಹಿಣಿ ಸಿಂಧೂರಿ ಅವರಿಗೆ ಮೈಸೂರು ಡಿಸಿ ಪೋಸ್ಟ್ ಉಡುಗೊರೆಯಾಗಿ ಸಿಕ್ಕಿದೆ ಎಂಬ ಗಂಭೀರ ಆರೋಪವನ್ನು ಸಾ.ರಾ.ಮಹೇಶ್ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply