ರಾಮಮಂದಿರ ನಿರ್ಮಾಣ ಕಾರ್ಯವು ಇತಿಹಾಸವನ್ನು ಮರು ಸೃಷ್ಟಿಮಾಡಿದೆ:   ಪ್ರಧಾನಿ ಮೋದಿ   

ಅಯೋಧ್ಯೆ : ಎಲ್ಲೇಲ್ಲೂ ರಾಮ, ಎಲ್ಲರ ಮನದಲ್ಲೂ ರಾಮ. ಇಷ್ಟು ದಿನ ಟೆಂಟ್ ನಲ್ಲಿದ್ದ ರಾಮನೂ ಹಲವು ಭಕ್ತರ ನಿರಂತರ ಹೋರಾಟದ ಫಲವಾಗಿ ಇಂದು ಬೃಹತ್ ಮಂದಿರ ನಿರ್ಮಾಣ ಕಾರ್ಯಕ್ಕೆ ಅಡಿಪಾಯ ಹಾಕಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಅಯೋಧ್ಯೆಯಲ್ಲಿ ಇಂದು(ಆ.5) ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾವಿನ್ಯಾಸ ನೆರವೇರಿಸಿ ಸಭೆಯನ್ನು ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಿದರು.
 ರಾಮನ ಅಸ್ಥಿತ್ವ ಕಳೆಯಲೂ ಅನೇಕ ಪ್ರಯತ್ನಗಳು ನಡೆದವು, ರಾಮಮಂದಿರದ ಕಟ್ಟಡಗಳನ್ನು ನಷ್ಟಮಾಡಲಾಯಿತ್ತು. ಆದರೂ ರಾಮ ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ರಾಮಮಂದಿರವು ಆಧುನಿಕತೆಯ, ರಾಷ್ಟ್ರೀಯ ಭಾವನೆಯ, ಹಾಗೂ ಕೋಟಿ ಜನರ ಸಾಮೂಹಿಕ ಸಂಕಲ್ಪ ಶಕ್ತಿಯ ಮತ್ತು ಮುಂದಿನ ತಲೆಮಾರಿಗೆ ಭಕ್ತಿ, ಸಂಕಲ್ಪದ ಪ್ರೇರಣೆಯನ್ನು ಈ ಭವ್ಯ ಮಂದಿರ ನೀಡಲಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಗುಲಾಮತನದಿಂದ ಬಿಡುಗಡೆಯಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಸಂಗ್ರಾಮ, ದೇಶ ಪ್ರೇಮಿಗಳ ಬಲಿದಾನದಿಂದ ಆ.15ರಂದು ಸ್ವಾತಂತ್ರ ದೊರೆಕಿತ್ತು. ಅದೇ ರೀತಿ ರಾಮಮಂದಿರ ನಿರ್ಮಾಣಕ್ಕಾಗಿ ತಲೆಮಾರುಗಳ ಪ್ರಯತ್ನಗಳು ನಡೆದಿವೆ ಅದರ ಫಲವೇ ಇಂದು ರಾಮಮಂದಿರದ ಈ ಶಿಲಾ ನ್ಯಾಸ ಕಾರ್ಯಕ್ರಮ ನೆರವೇರಿತು ಎಂದರು.
ಅಯ್ಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ  ಭವ್ಯ ಭಾರತದ ಸೃಷ್ಠಿ ಭದ್ರ ಬುನಾದಿಯಾಗಲಿದ್ದು, ರಾಮ ಮಂದಿರ ನಿರ್ಮಾಣ ಸಂಪೂರ್ಣವಾದ ಬಳಿಕ ಭಾರತ ಕೀರ್ತಿ ಹೆಚ್ಚಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಒಂದೊಂದು ಕಡೆ ಒಂದೊಂದು ಭಾಷೆಯಲ್ಲೂ ಒಂದೊಂದು ರಾಮಾಯಣ ಇದೆ.
ತಮಿಳಿನಲ್ಲಿ ಕಂಬ ರಾಮಾಯಣ ​,​ಕನ್ನಡದಲ್ಲಿ ಸುಮದೇಂಧು ​​ರಾಮಾಯಣ.​,​ ಶ್ರಿಲಂಕಾದಲ್ಲಿ ರಾಮಾಯಣ ಕೇಳಿಸಲಾಗುತ್ತದೆ. ಮುಸ್ಲಿಂರು ಹೆಚ್ಚಿರುವ ರಾಷ್ಟಗಳಲ್ಲೂ ರಾಮಾಯಣವನ್ನು ನಾವು ಕಾಣಬಹುದು ಎಂದರು.​
ರಾಮ ಮಂದಿರ ನಿರ್ಮಾಣ ಕಾರ್ಯವು ಇತಿಹಾಸವನ್ನು ಮರು ಸೃಷ್ಟಿಮಾಡಿದೆ ಎಂದು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು. ಭಾರತದ ಈ ಮಹತ್ವದ ಹಾಗೂ ಐತಿಹಾಸಿಕ ಕಾರ್ಯಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದಕ್ಕೆ ರಾಮ ಜನ್ಮ ಭೂಮಿ ಟ್ರಸ್ಟ್ ಗೆ ಧನ್ಯವಾದ ತಿಳಿಸಿದರು
 
 
 
 
 
 
 
 
 

Leave a Reply