ಪೂಜಾ ಫಲ

ರಾಮಾ‌‌…ಶ್ರೀರಾಮ ..ರಾಮಾ..ಜಯ ರಾಮ,..ಜಯ ಜಯಾ ರಾಮ..
ನಮಗೆ ನಿನ್ನ ನಾಮದ ಬಲ..
ಫಲಿಸಿತು ಶತಕಗಳ ಪೂಜಾ ಫಲ.
ರಾಮನವತರಿಸಿದ ಅಯೋಧ್ಯೆಯಲಿ ಶ್ರೀ ರಾಮ ಮಂದಿರ…

ಹರುಷ ತಂದ ಶ್ರಾವಣಮಾಸದ ಬಹುಳ ಬಿದಿಗೆಯ ದಿನ…
ಶುಭ ಯೋಗ,ಶುಭ ಕರಣ ,ಶುಭ ಮುಹೂರ್ತದ ಸುದಿನ..
ಅಂದು ಕಲಿಯುಗದ ಕಲ್ಪತರು ಶ್ರೀ ಗುರು ರಾಯರು ಬೃಂದಾವನೈಕ್ಯರಾದ ಪುಣ್ಯ ದಿನ..
ಇಂದು ಅಯೋಧ್ಯಾರಾಮನ ಮಂದಿರಕ್ಕೆ ಬಲು ಅಪೇಕ್ಷಿತ ಶಿಲಾನ್ಯಾಸ ಸಂಪನ್ನ..

ದಶರಥ ಪುತ್ರ,ರಘುಕುಲೋತ್ತಮ ಶ್ರೀರಾಮನಿಗೆ ಕಟ್ಟುವ ಭವ್ಯ ದೇವಾಲಯದ ಕನಸು..
ಕೌಸಲ್ಯಾ ನಂದನ , ಮರ್ಯಾದಾಪುರುಷೋತ್ತಮ ಜಾನಕೀರಾಮನ ಭಕ್ತರಿಗಿಂದು ನನಸು..
ಕೋದಂಡರಾಮನಿಗೆ ಕಟ್ಟುವ ಅದ್ಭುತ ದೇಗುಲದ ಕಲ್ಪನೆಯೇ ಸೊಗಸು…
ಸಂತಸ,ಸಂಭ್ರಮ ಸಡಗರದಿ ನಲಿದಿದೆ ನಮ್ಮಯ ಮನಸು.

ಭಕ್ತರಾಧೀನ ರಾಮ ತನ್ನ ನಿಜ ಭಕುತರ ಅಚಲ ಭಕ್ತಿಗೆ ಒಲಿದು..
ತನ್ನ ನಂಬಿದ ಕರಸೇವಕರ ಸ್ವಾಮಿ ನಿಷ್ಠೆಗೆ ನಲಿದು..
ತನ್ನ ಆರಾಧಿಪ ಸಾಧು ಸಂತರ ಮನದ ಆಶಯ ಪೂರೈಸಲೆಂದು…
ನಸುನಗುತ ನಿಂದಿಹನಿಲ್ಲಿ ತನ್ನ ನಂಬಿದವರಿಗೆ ಅಭಯವ ನೀಡಲೆಂದು‌‌.

ರಾಮಾ…ಶ್ರೀ ರಾಮಾ..
ರಾಮಾ..ಜಯರಾಮಾ…ಜಯ ಜಯಾರಾಮ….
ನಮಗೆ ನಿನ್ನ ನಾಮದ ಬಲ..
ಫಲಿಸಿತು ಶತಕಗಳ‌ ಪೂಜಾ ಫಲ..
ಅಯೋಧ್ಯೆಯಲಿ ಶ್ರೀರಾಮ ಮಂದಿರ…

ಪೂರ್ಣಿಮಾ ಜನಾರ್ದನ್

Leave a Reply