ನೀಲಾವರ ಗೋಶಾಲೆಯಲ್ಲಿ ಗಿರಿ ಬಳಗದವರಿಂದ ಶ್ರಮದಾನ  

ನೀಲಾವರ ಗೋಶಾಲೆಗೆ ಕುಂಜಾರುಗಿರಿ “ಗಿರಿ ಬಳಗ”ದವರಿಂದ ಶ್ರಮದಾನ  
ಶ್ರೀ ಪೇಜಾವರ ಮಠದ ಆಡಳಿತಕ್ಕೆ ಒಳಪಟ್ಟ ರಾಜ್ಯದ ಅತಿದೊಡ್ಡ ಗೋಶಾಲೆಗಳಲ್ಲಿ ಒಂದಾದ ನೀಲಾವರ ಗೋಶಾಲೆಯಲ್ಲಿ ಕುಂಜಾರುಗಿರಿಯ ಗಿರಿ ಬಳಗ(ರಿ) ಸಂಸ್ಥೆಯ ಸದಸ್ಯರು ದಿನಪೂರ್ತಿ ಶ್ರಮದಾನ. ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ನೀಲಾವರ ಚಾತುರ್ಮಾಸ್ಯದ ಸಂದರ್ಭದಲ್ಲಿ ನಡೆಸಿದ ಈ ಶ್ರಮದಾನದ ಭಾಗವಾಗಿ ಒಂದು ನೂರಕ್ಕೂ ಹೆಚ್ಚು ತೆಂಗಿನ ಬುಡ ಬಿಡಿಸಿ ಗೊಬ್ಬರ ಹಾಕಲಾಯಿತು.   2000ಕ್ಕೂ ಹೆಚ್ಚು ಗೋವುಗಳಿರುವ  ಗೋಶಾಲಾ ಕಟ್ಟಡವನ್ನು ಪೂರ್ತಿಯಾಗಿ ನೀರಿನಿಂದ ತೊಳೆದು ಶುಚಿಗೊಳಿಸಲಾಯಿತು.  ಸಿಬ್ಬಂದಿಗಳ ಮತ್ತು ಸ್ವಾಮೀಜಿಯವರ ಚಾತುರ್ಮಾಸ್ಯ ಅವಧಿಯಲ್ಲಿ ದಿನನಿತ್ಯದ ಬಳಕೆಗಾಗಿ ಸುಮಾರು ಐದು ನೂರಕ್ಕೂ ಹೆಚ್ಚು ತೆಂಗಿನ ಕಾಯಿಗಳ ಸಿಪ್ಪೆ ಸುಲಿದು ಉಪಯೋಗಕ್ಕೆ ಅಣಿಗೊಳಿಸಲಾಯಿತು. 
ಶ್ರಮದಾನಕ್ಕೆ ತೆರಳುವಾಗ ಒಂದು ಲೋಡ್ ಬೈಹುಲ್ಲು ಹಾಗು ಒಂದು ಲೋಡ್ ಹಸಿರು ಮೇವನ್ನು ಶ್ರೀಗಳವರ ಅಮೃತ ಹಸ್ತದಿಂದ ಗೋವುಗಳಿಗೆ ಸಮರ್ಪಿಸಲಾಯಿತು. ಗೋಸೇವೆಯಲ್ಲಿ ಸೇವೆಯಲ್ಲಿ ಹಲವಾರು ವರ್ಷಗಳಿಂದ ನಿರಂತರ ತನ್ನನ್ನು ತೊಡಗಿಸಿ ಕೊಂಡಿ ರುವ ಪೇಜಾವರ ಶ್ರೀಪಾದರಿಗೆ ಗೋವುಗಳ ನಡುವಿನಲ್ಲಿ ವಿಶಿಷ್ಟ ರೀತಿಯಲ್ಲಿ ಪಾದಪೂಜೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು. 
 
 
 
 
 
 
 
 
 
 
 

Leave a Reply