Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಮಲ್ಪೆ ಬಂದರಿನಲ್ಲಿ​  ಮೀನು ಆಯುವ ಬಳ್ಳಾರಿ ಮತ್ತು ಕೊಪ್ಪಳ ಮೂಲದ  17 ಮಕ್ಕಳ ರಕ್ಷಣೆ

ಮಲ್ಪೆ : ಜಿಲ್ಲಾ ಮಕ್ಕಳ ರಕ್ಷಣಾ ಘಟಕ​,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಸಾರ್ವಜನೀಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ, ನಾಗರಿಕ ಸೇವಾ ಟ್ರಸ್ಟ್ ಉಡುಪಿ ವತಿಯಿಂದ ಮಲ್ಪೆ ಬಂದರಿಗೆ ದಾಳಿ ನಡೆಸಿ ಮೀನು ಆಯುವ ಬಳ್ಳಾರಿ ಮತ್ತು ಕೊಪ್ಪಳ ಮೂಲದ 17 ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ.

ನಿರಂತರ ದೂರುಗಳು ಬಂದ ಹಿನ್ನಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಬೆಳ್ಳಂಬೆಳಿಗ್ಗೆ ೫ ಗಂಟೆಗೆ ದಾಳಿ ನಡೆಸಲಾಯಿತು.  ಇದರ ಹಿಂದೆ ದೊಡ್ಡ ಜಾಲವೊಂದು ಕಾರ್ಯಚರಿಸುತ್ತಿದೆ. ದಿನಾ ಬೆಳಿಗ್ಗೆ ೩-೪ ಗಂಟೆಗೆ ಒಂದು ವ್ಯಾನಿನಲ್ಲಿ ಈ ಮಕ್ಕಳನ್ನು ಬಿಟ್ಟು ಹೋಗು ವರು.  ಈ ಜಾಲದ ಹಿಂದೆ ಹದ್ದಿನ ಕಣ್ಣಿಟ್ಟರೆ  ಇನ್ನಷ್ಟು ಮಕ್ಕಳನ್ನು ರಕ್ಷಣೆ ಮಾಡಬಹುದೆಂದು ಎಂದು ಸ್ಥಳೀಯರು ಮಾತನಾಡಿ ಕೊಳ್ಳುತ್ತಿದ್ದಾರೆ.  ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ರಕ್ಷಾಣಾಧಿಕಾರಿ ಮಹೇಶ್ ದೇವಾಡಿಗ, ಕಾರ್ಮಿಕ ಅಧಿಕಾರಿ ಕುಮಾರ್, ಕಾರ್ಮಿಕ ನಿರೀಕ್ಷಕ ಪ್ರವೀಣ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ನಾಗರಾಜ್, ರಕ್ಷಣಾ ಘಟಕದ ಸಮಾಜ ಕಾರ್ಯಕರ್ತ​ ​ರಾದ ಯೋಗೀಶ್, ಸುರಕ್ಷಾ, ಸುನಂದಾ,

ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಸಾವಿತ್ರಿ, ಅರುಣಾ, ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಸವಿತಾ, ಜಗದೀಶ್, ನಿತ್ಯಾನಂದ ಒಳಕಾಡು, ಶಿಲ್ಪಾ, ಸುಶ್ಮಿತಾ, ಮಕ್ಕಳ ಸಹಾಯವಾಣಿಯ ಕಸ್ತೂರಿ, ತ್ರಿವೇಣಿ, ನೇತ್ರ, ವಿಶ್ವಾಸದ​ ​ಮನೆ ಶಂಕರಪುರ ಸಂಸ್ಥೆಯ ಕ್ರಿಸ್ಟೋಪರ್ ಭಾಗವಹಿಸಿದ್ದರು.​​

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!