ಕುಬ್ಜಾ ನದಿ ಕಮಲಶಿಲೆ ದೇವಳ ಪ್ರವೇಶ

ಕುಂದಾಪುರ: ಕಳೆದ ಎರಡು ದಿನದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಆ.4 ಮಂಗಳವಾರ ಕುಬ್ಜಾ ನದಿ ಕಮಲಶಿಲೆಯ ದೇವಸ್ಥಾನ ಪ್ರವೇಶ ಮಾಡಿದ್ದು, ಮಂಗಳವಾರ ಸಂಜೆ ದೇವಸ್ಥಾನಕ್ಕೆ ಬಂದ ಕುಬ್ಜಾ ನದಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಗೆ ಅಮ್ಮನವರಿಗೆ ತೀರ್ಥ ಸ್ನಾನ ಮಾಡಿಸಿದೆ.​ ಕುಬ್ಜಾ ನದಿ ದೇವಿ ಪಾದ ತೊಳೆದಿದ್ದರಿಂದ ದೇವಸ್ಥಾನದ ಅರ್ಚಕರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪ್ರತೀ ವರ್ಷ ಕುಬ್ಜಾ ನದಿ ದೇವಸ್ಥಾನ ಪ್ರವೇಶಿಸಿ ದೇವಿ ಪಾದ ತೊಳೆಯುತ್ತಾಳೆ ಎನ್ನೋದು ಭಕ್ತರ ನಂಬಿಕೆ ಜೊತೆ ವಾಡಿಕೆಯೂ ಇದೆ.​ ಇಷ್ಟು ಬಾರಿ ಕಮಲಶಿಲೆಗೆ ಕುಬ್ಜಾ ನದಿ ನೀರು ನುಗ್ಗಿ ದೇವಿಗೆ ಸ್ನಾನ ಮಾಡಿಸುವುದು ಭಕ್ತರ ಪಾಲಿನ ಸುದಿನವಾಗಿತ್ತು. ಊರ-ಪರವೂರ ಭಕ್ತಾಧಿಗಳು ಈ ದಿನಕ್ಕಾಗಿ ಕಾದು ಆ ಸಮಯಕ್ಕೆ ಸ್ಥಳಕ್ಕೆ ಬಂದು ತಾವು ಕೂಡ ಪವಿತ್ರ ಸ್ನಾನ ಮಾಡಿ ಸಂತ್ರಪ್ತರಾಗುತ್ತಿದ್ದರು. ಆದರೆ ಈ ಬಾರಿ ಕೊರೋನಾ ಭಯದ ನಡುವೆ ಭಕ್ತಾದಿಗಳ ಆಗಮನ ಇರಲಿಲ್ಲ.

ಮಂಗಳವಾರ ಸಂಜೆ ದೇವಸ್ಥಾನ ಪ್ರವೇಶಿಸಿದ ಕುಬ್ಜೆಯ ಪವಿತ್ರ ಸ್ನಾನಕ್ಕೆ ಈ ಬಾರಿ ಬೆರಳೆಣಿಕೆ ಸ್ಥಳೀಯ ಭಕ್ತರು ಮಾತ್ರ ಆಗಮಿಸಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡು ದೇವರ ದರ್ಶನ ಪಡೆದರು. ದೇವಳದ ಮೊಕ್ತೇಸರರು, ಅರ್ಚಕ ವರ್ಗದವರು ಮತ್ತು ಸಿಬ್ಬಂದಿ ಗಳು ಮಾತ್ರ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದ್ದರು.

 
 
 
 
 
 
 
 
 
 
 

Leave a Reply