ಗೃಹ ದಿಗ್ಬಂಧನ ಆರೈಕೆ ಕಿಟ್ ಬಿಡುಗಡೆ

ಮಣಿಪಾಲ: ಕೋವಿಡ್ 19 ಚಿಕಿತ್ಸೆ ಈಚಿನ ಮಾರ್ಗಸೂಚಿಯಂತೆ ಮನೆಯಲ್ಲಿಯೇ ಐಸೋಲೇಶನ್ (ಗೃಹ ದಿಗ್ಬಂಧನ) ಚಿಕಿತ್ಸೆ ಪಡೆಯುವ ರೋಗಿಗಳಿಗೆ ಅನುಕೂಲವಾಗುವಂತೆ ಮಣಿಪಾಲ ಕೆಎಂಸಿ ಆಸ್ಪತ್ರೆ ಬುಧವಾರ ಹೋಮ್ ಐಸೋಲೇಶನ್ ಆರೈಕೆ ಮಾಹಿತಿ ಮತ್ತು ಕಿಟ್ ಸಿದ್ಧಪಡಿಸಿದೆ

ಆಸ್ಪತ್ರೆಯ ಮುುಖ್ಯ ಕಾರ್ಯನಿರ್ವಣಾಧಿಕಾರಿ ಜಿ. ಮುತ್ತಣ್ಣ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಮೊದಲ ಕಿಟ್ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಮಾರುಕಟ್ಟೆ ಮುಖ್ಯಸ್ಥ ಸಚಿನ್ ಕಾರಂತ ಮತ್ತು ಆಪರೇಷನ್ ಮುಖ್ಯಸ್ಥ ಜಿಬು ಥಾಮಸ್ ಇದ್ದರು.

ಎರಡು ಬಗೆಯ ಪ್ಯಾಕೇಜ್ ಮತ್ತು ಕಿಟ್ ಸೌಲಭ್ಯವಿದ್ದು, 10 ದಿನಗಳ ಸಾಮಾನ್ಯ ಪ್ಯಾಕೇಜ್ ಗೆ 4 ಸಾವಿರ ರೂ. ನಿಗದಿಪಡಿಸಲಾಗಿದೆ. ಅದರಲ್ಲಿ ತಲಾ 1 ಥರ್ಮೋಮೀಟರ್, ಪಲ್ಸ್ ಒಕ್ಸಿಮೀಟರ್, ಪಿಪಿಇ ಕಿಟ್ ಸ್ಯಾನಿಟೈಜರ್ (500 ಮಿ.ಲೀ.) ಮತ್ತು ವೈಟಲ್ ಚಾರ್ಟ್ ಹಾಗೂ 10 ಮುಖಗವಸು ಇದೆ. ವೈದ್ಯರೊಂದಿಗೆ 3 ಬಾರಿ ಉಚಿತ ವಿಡಿಯೋ ಸಮಲೋಚನೆ (1, 5 ಮತ್ತು 9ನೇ ದಿನ), ಒಂದು ಸಲ ಪಥ್ಯಾಹಾರ ತಜ್ಞರೊಂದಿಗೆ ಉಚಿತ ಸಮಾಲೋಚನೆ ಹಾಗೂ ದಿನಕ್ಕೆ ಒಂದು ಬಾರಿ ದಾದಿಯರೊಂದಿಗೆ ಉಚಿತ ವೀಡಿಯೊ ಸಮಾಲೋಚನೆ ಒಳಗೊಂಡಿದೆ. 10 ದಿನಗಳ ಸಮಗ್ರ ಪ್ಯಾಕೆಜ್ ಗೆ ಹೆಚ್ಚುವರಿ 6 ಸಾವಿರ ರೂ. ಪಾವತಿಸಿದಲ್ಲಿ 1 ಬಿಪಿ ಅಪರೇಟಿಸ್ ದೊರೆಯಲಿದೆ. ಹೆಚ್ಚಿನ ಮಾಹಿತಿಗೆ 0820- 2922761ನ್ನು ಸಂಪರ್ಕಿಸುವಂತೆ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 

Leave a Reply