ದಿಟದ ನಾಗನಿಗೆ ಸಂದಿತು ಪೂಜೆ

                  ದಿಟದ ನಾಗನಿಗೆ ಸಂದಿತು ಪೂಜೆ

ಕಲ್ಲ ಹಾವನು ಕಂಡರೆ ಪೂಜಿಪರು, ದಿಟದ ಹಾವು ಕಂಡರೆ ಕೊಲ್ಲುವರಯ್ಯ ಎಂಬ ಮಾತಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪವಾದ ಉಂಟು. ಇಲ್ಲಿ ನಾಗನ ಕಲ್ಲಿಗೂ ಪೂಜಿಸುವರು, ದಿಟದ ಹಾವನ್ನು ಕಂಡರೆ ಕೊಲ್ಲರು. ಆದರೆ, ಉಡುಪಿ ಸಮೀಪದ ಕಾಪು ಬಳಿಯ ಮಜೂರು ನಿವಾಸಿ ಗೋವರ್ಧನ ಭಟ್ ಎಂಬವರು ಪ್ರತಿ ವರ್ಷ ನಾಗರಪಂಚಮಿಯಂದು ಜೀವಂತ ನಾಗನಿಗೇ ತನು ಎರೆದು ಪೂಜೆ ಸಲ್ಲಿಸುವುದು ಸಂಪ್ರದಾಯ. ಅದರಂತೆ ಈ ಬಾರಿಯೂ ಹಾಗೆಯೇ ನಾಗರ ಪಂಚಮಿ ಹಬ್ಬ ಆಚರಿಸಿದರು.

ವಿವಿಧೆಡೆ ಅಪಾಯಕ್ಕೆ ಸಿಲುಕಿ ಗಾಯಗೊಳ್ಳುವ ನಾಗರ ಹಾವುಗಳನ್ನು ಮನೆಗೆ ತಂದು ಶುಶ್ರೂಷೆ ನೀಡಿ, ಆರೈಕೆ ಮಾಡುವುದು ಗೋವರ್ಧನ ಭಟ್ ಕಾಯಕ. ಈ ಬಾರಿ ಶುಶ್ರೂಷೆಯಲ್ಲಿರುವ 8 ನಾಗರಹಾವುಗಳಿಗೆ ಹಾಲೆರೆದು ಪೂಜಿಸಿದ್ದಾರೆ.

ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿರುವ ಗೋವರ್ಧನ ಭಟ್, ಇದೀಗ ಕ್ಯಾಟರಿಂಗ್ ಉದ್ಯಮ ನಡೆಸುತ್ತಿದ್ದಾರೆ. ಜೊತೆಗೆ ಸಮಾಜಸೇವೆಯಲ್ಲೂ ನಿರತರಾಗಿರುವ ಅವರು, ಉರಗ ಪ್ರೇಮಿಯಾಗಿ ಈವರೆಗೆ ಸಾವಿರಾರು ಹಾವುಗಳಿಗೆ ಮರುಜನ್ಮ ನೀಡಿದ್ದಾರೆ. ಅವರ ಆರೈಕೆಯಲ್ಲಿ ಚೇತರಿಸಿಕೊಂಡ ಹಾವುಗಳನ್ನು ನಾಗಬನ ಅಥವಾ ಕಾಡಿಗೆ ಬಿಡುತ್ತಾರೆ.

 
 
 
 
 
 
 
 
 
 
 

Leave a Reply