ಜಾಲತಾಣದೊಳು ಕೃಷ್ಣನ ಭಾವಯಾನ..

 

ಕರ್ಷತಿ ಇತಿ ಕೃಷ್ಣಃ ಅಂದರೆ ಎಲ್ಲರನ್ನೂ ಆಕರ್ಷಿಸುವವನು ಕೃಷ್ಣ ಎಂಬ ಮಾತು ಎಂದೆಂದಿಗೂ ಪ್ರಸ್ತುತ. ದ್ವಾಪರ ಯುಗದಿಂದ ಕಲಿಯುಗದವರೆಗೂ ಕೃಷ್ಣನ ಆಕರ್ಷಣೆ ಒಂದಿನಿತೂ ಕಡಿಮೆ ಆಗಿಲ್ಲ.

ಕಲಿಯುಗದಲ್ಲಿ ಕೃಷ್ಣನ ಜನ್ಮದಿನದ ಸಡಗರದ ಕೃಷ್ಣಾಷ್ಟಮಿಯಂದು ಕೃಷ್ಣವೇಷ ತೊಟ್ಟು ತಾವೂ ಸಂಭ್ರಮಿಸಿ ಇತರರಿಗೂ ಸಡಗರ ತರುವ ಸಂಪ್ರದಾಯ ವಿಶಿಷ್ಠವಾದುದು,ವಿಶೇಷವಾದುದು. ಮನೆ ಮನೆಯಲ್ಲಿ ಪುಟ್ಟ ಪುಟ್ಟ ಕಂದಮ್ಮಗಳಿಗೆ ಬಾಲಕೃಷ್ಣ ವೇಷ ತೊಡಿಸಿ ತಾಯಂದಿರು ಸಂಭ್ರಮಿಸಿದರೆ, ಕಿಶೋರ ಕಿಶೋರಿಯರು ರಾಧಾಕೃಷ್ಣ, ಮೀರಾ ಕೃಷ್ಣ, ರುಕ್ಮಿಣೀ ಕೃಷ್ಣ, ಸತ್ಯಭಾಮಾಕೃಷ್ಣ, ಗೋಪಾಲಕೃಷ್ಣರಾಗಿ ನಲಿದಾಡುತ್ತಾರೆ. ತಾಯಂದಿರು ತಮ್ಮ ಮಕ್ಕಳೊಂದಿಗೆ ಯಶೋದಾ ಕೃಷ್ಣ, ದೇವಕೀ ಕೃಷ್ಣವೇಷ ಧರಿಸಿ ಸಂಭ್ರಮಿಸಿ ಖುಷಿ ಪಡುತ್ತಾರೆ. ಕೃಷ್ಣನ ಬಗೆ ಬಗೆಯ ತುಂಟಾಟ, ಚೆಲ್ಲಾಟದ ವಿವಿಧ ಭಾವ ಭಂಗಿಗಳು ಎಲ್ಲರನ್ನೂ ಮನಸೆಳೆಯುವಂತದ್ದು.

ಹುಟ್ಟಿದಾಗಿನಿಂದ ಕೊನೆಯವರೆಗೂ ಅವನ ಅವತಾರ ಸಮಾಪ್ತಿಯ ಸಂದರ್ಭಗಳು ಅದ್ವಿತೀಯ, ಅದ್ಭುತ ‌,ಅನನ್ಯ. ಕಳೆದ ವರುಷದ ತನಕ ಕೃಷ್ಣವೇಷ ತೊಟ್ಟು ಇಡೀ ನಗರ ಸುತ್ತು ಹೊಡೆದು ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸುವ ಪರಿಪಾಠ. ಆದರೆ ಈಗ ಹಾಗಿಲ್ಲ. ಕೋವಿಡ್ 19 ನ ಕದಂಬ ಬಾಹುಗಳಿಂದ ತಪ್ಪಿಸಿಕೊಳ್ಳಲು ಎಲ್ಲರಿಗೂ ಇರುವ ಏಕೈಕ ಮಾರ್ಗವೆಂದರೆ ಮನೆಯೊಳಗಿದ್ದೇ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮಿಸುವುದು. ಹಾಗಾಗಿ ಈ ದಿನಗಳಲ್ಲಿ ಎಲ್ಲರೂ ನೆಚ್ಚಿಕೊಂಡಿರುವುದು, ಮನೆಯೊಳಗೇ ಕುಳಿತು ಕೈಬೆರಳುಗಳ ತುದಿಯಲ್ಲೇ ಸಿಗುವ ಸಾಮಾಜಿಕ ಜಾಲ ತಾಣಗಳನ್ನು.

ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ಈ ವರುಷ ಕೃಷ್ಣ ವೇಷಧಾರಿಯಾಗಿ ಭಾವನಾತ್ಮಕ ಅಭಿನಯದಿಂದ ಎಲ್ಲರನ್ನೂ ಭಾವ ಮುಗ್ಧಗೊಳಿಸಿದ ಕಿನ್ನಿಗೋಳಿಯ ಮನಿಷಾ ಶೆಟ್ಟಿ, ಕೃಷ್ಣನ ಭಾವನೆಗಳಿಗೆ ಭಾವ ತುಂಬಿದ ರಾಧೆಯಾಗಿ ಕಾವ್ಯಾ ಪೂಜಾರಿ, ಇವರ ಭಾವ ಚಿತ್ರ ಗಳು ಎಲ್ಲವೂ ಭಾವಪೂರ್ಣವಾಗಿದ್ದು ಎಲ್ಲರ ಮನವ ಆಕರ್ಷಿಸುತಲಿವೆ.

ಇವರ ಛಾಯಾಚಿತ್ರ ತೆಗೆದ ಛಾಯಾಗ್ರಾಹಕ ಕಿನ್ನಿಗೋಳಿಯ ಎಸ್ ಕೆ ಡಿಜಿಟಲ್ ಸ್ಟುಡಿಯೋದ ಅಜಿತ್ ಪೂಜಾರಿ ಇವರ ಕೈ ಚಳಕವನ್ನು ಅಭಿನಂದಿಸಲೇ ಬೇಕು. ನಾವೆಲ್ಲ ಈ ವರುಷ ಮನೆ ಮನೆಗಳಲ್ಲಿ ಕೃಷ್ಣನನ್ನು ಭಕ್ತಿ ಪೂರ್ವಕವಾಗಿ ,ಭಾವತುಂಬಿ ಪೂಜಿಸೋಣ. ನಮ್ಮ ನಮ್ಮ ಮಕ್ಕಳಿಗೆ

ಮನೆಯಲ್ಲೇ ಇರುವ ಸಲಕರಣೆಗಳೊಂದಿಗೆ ಕೃಷ್ಣವೇಷ ತೊಡಿಸಿ ಖುಷಿ ಪಡೋಣ..ಜಾಲ ತಾಣಗಳಲ್ಲಿ ಹಂಚಿ ಸಂಭ್ರಮಿಸೋಣ.

®ಪೂರ್ಣಿಮಾ ಜನಾರ್ದನ್

 
 
 
 
 
 
 
 
 
 
 

Leave a Reply