ಕೊರೊನಾದಲ್ಲಿ ಭ್ರಷ್ಟಾಚಾರ ನಡೆದ ಬಗ್ಗೆ ದಾಖಲೆ ಇದ್ದರೆ ನೀಡಿ- ಜಿಲ್ಲಾಧಿಕಾರಿ

ಉಡುಪಿ,  24-ಕೊರೊನಾದಲ್ಲಿ ಭ್ರಷ್ಟಾ ಚಾರ ನಡೆದ ಬಗ್ಗೆ ದಾಖಲೆ ಇದ್ದರೆ ನೀಡಿ. ಅದು ಬಿಟ್ಟು ಸೋಶಿಯಲ್ ಮೀಡಿ ಯಾದಲ್ಲಿ ಅನಾವಶ್ಯಕ ಆರೋಪ ಮಾಡಿದ್ರೆ ಸುಮ್ಮನಿ ರಲ್ಲ- ಉಡುಪಿ ಡಿ.ಸಿ ಗರಂ

26 ವರ್ಷದ ಮಹಿಳೆ ಸಾವಿನಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ತನಿಖೆ ಗಾಗಿ ತಂಡ ರಚನೆ ಮಾಡಿದ್ದೇವೆ. ಲೋಪ ಕಂಡು ಬಂದರೆ ಖಾಸಗಿ ಆಸ್ಪತ್ರೆ ವಿರುದ್ಧ ಶಿಸ್ತುಕ್ರಮ. ಶವ ಅದಲುಬದಲಾದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಡಿಸಿ. ಇಂತಹ ಘಟನೆ ಮರು ಕಳಿಸದಂತೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದೇವೆ.

ಜಿಲ್ಲೆಯಲ್ಲಿ ಕೊರೊನಾ ಟೆಸ್ಟ್ ಪ್ರಮಾಣವನ್ನು ಹೆಚ್ಚು ಮಾಡಿದ್ದೇವೆ.  ರೋಗ ಹಬ್ಬದಿರಲಿ ಎಂಬ ಉದ್ದೇಶದಿಂದ ಈ ಕ್ರಮ.  ರೋಗ ಲಕ್ಷಣ ಇಲ್ಲದವರು ಮನೆಯಲ್ಲೇ ಕ್ವಾರಂ ಟೈನ್ ಆಗಿ. ಅದು ಬಿಟ್ಟು ಸುತ್ತಾಡಿದರೆ ರೋಗ ಹಬ್ಬುತ್ತದೆ.

ಖಾಸಗಿ ಆಸ್ಪತ್ರೆಯವರು ಹಣದ ದಂಧೆ ಮಾಡುತ್ತಾರೆ ಎಂದು ಶೋಷಿಯಲ್ ಮೀಡಿಯಾದಲ್ಲಿ ಆರೋಪ ಮಾಡ್ತಾರೆ. ದುರುದ್ದೇಶದಿಂದ ಆರೋಪ ಮಾಡದೆ , ದಾಖಲೆ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ.  ಸುಮ್ನೇ ಆರೋಪ ಮಾಡಿದ್ರೆ ಸಹಿಸು ವುದಿಲ್ಲ.  ಜಿಲ್ಲಾಧಿಕಾರಿ ಜಿ.ಜಗದೀಶ್ ಖಡಕ್ ವಾರ್ನಿಂಗ್

Leave a Reply