Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ಉಡುಪಿ ಶ್ರೀ ಕೃಷ್ಣಮಠದ ಪಂಕ್ತಿ ಭೋಜನದ ಹೆಸರಿನಲ್ಲಿ ಜಾತಿ ನಿಂದನೆ ಪ್ರಕರಣ ರದ್ದು

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪಂಕ್ತಿ ಭೋಜನದ ಹೆಸರಿನಲ್ಲಿ ಜಾತಿ ನಿಂದನೆ ಹಾಗೂ ಮಾನಹಾನಿ ಮಾಡಲಾಗಿದೆ ಎಂದು ಮಹಿಳೆಯೊಬ್ಬರು ಭೋಜನ ಶಾಲೆಯ ಸಿಬ್ಬಂದಿ ಶಂಕರ ಭಟ್‌ ವಿರುದ್ಧ 2014ರಲ್ಲಿ ಸಲ್ಲಿಸಿದ್ದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ಬುಧವಾರ ರದ್ದುಗೊಳಿಸಿದೆ.


ವನಿತಾ ಎನ್‌. ಶೆಟ್ಟಿ ದಾಖಲಿಸಿದ್ದ ಪ್ರಕರಣ ವನ್ನು ರದ್ದುಪಡಿಸಲು ಕೋರಿ ಶಂಕರ ಭಟ್‌ ಸಲ್ಲಿಸಿದ್ದ ಅರ್ಜಿಯ ಕುರಿತ ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿದ ನ್ಯಾ| ಬಿ.ಎ. ಪಾಟೀಲ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.


ಪ್ರಕರಣದಲ್ಲಿ ಮೂಲ ದೂರುದಾರರು ಆರೋಪಿಸಿರುವಂತೆ ಯಾವುದೇ ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿಲ್ಲ. ಮಠದಲ್ಲಿ ಕೆಲವೊಂದು ಸಂಪ್ರದಾಯ ಹಾಗೂ ನಿಯಮ ಗಳನ್ನು ಪಾಲಿಸಿಕೊಂಡು ಬರಲಾಗುತ್ತಿದ್ದು, ಅದರಂತೆ ದೂರು ದಾರರಿಗೆ ಸಾಮಾನ್ಯ ಭೋಜನ ಶಾಲೆಯಲ್ಲಿ ಊಟ ಮಾಡುವಂತೆ ತಿಳಿಸಲಾಗಿತ್ತು. ಇದು ಕಾನೂನಿನ ದುರ್ಬಳಕೆ ಯಾಗಿದೆ ಮತ್ತು ಆ ದೂರಿನ ಕುರಿತು ವಿಚಾ ರಣೆ ಅಗತ್ಯವಿಲ್ಲ ಎಂದು ರದ್ದುಗೊಳಿ ಸಿದೆ.


ಮಠದ ಪರ ವಾದ ಮಂಡಿಸಿದ ಎ. ಕೇಶವ ಭಟ್‌ ಮತ್ತು ಎಸ್‌.ಕೆ. ಆಚಾರ್ಯ ಅವರು, ದೂರುದಾರರು ಸ್ಥಳೀಯ ಮಹಿಳೆಯಾಗಿದ್ದು, ಅವರಿಗೆ ಮಠದ ನೀತಿ ನಿಯಮಗಳು ತಿಳಿ ದಿವೆ. ಬ್ರಾಹ್ಮಣರಿಗೆ ಮೀಸಲಾಗಿದ್ದ ಜಾಗದಲ್ಲಿ ಅವರು ಭೋಜನಕ್ಕೆ ಕುಳಿತಿ ದ್ದರು, ಆಗ ಅವರ ಮನವೊಲಿಸಿ ಸಾಮಾನ್ಯ ಭೋಜನ ಶಾಲೆಗೆ ಕಳುಹಿಸಲಾಯಿತು.

ಇದರಲ್ಲಿ ಅವರ ಯಾವುದೇ ನಾಗರಿಕ ಹಕ್ಕು ಗಳ ಉಲ್ಲಂಘನೆಯಾಗಿಲ್ಲ. ಮಠದಲ್ಲಿ ಕೆಲವು ಸಂಪ್ರದಾಯಗಳಿದ್ದು, ಅದರಂತೆ ನಡೆದು ಕೊಳ್ಳಲಾಗುತ್ತಿದೆ. ದೇವರ ದರ್ಶನಕ್ಕೆ ಯಾವು ದೇ ಅಡ್ಡಿ ಮಾಡಿಲ್ಲ. ದೂರುದಾರರಿಗೆ ಮಾನ ಹಾನಿ ಆಗಿಲ್ಲ, ಅವರ ಜಾತಿ ನಿಂದನೆಯೂ ಮಾಡಿಲ್ಲ ಎಂದು ವಿವರಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!