ಆಚಾರ್ಯ ಏಸ್: ಶಾರ್ವರಿಗೆ ಎಸೆಸೆಲ್ಸಿಯಲ್ಲಿ 623 ಅಂಕ:

ಉತ್ಕೃಷ್ಟ ಗುಣಮಟ್ಟದ ತರಬೇತಿಗೆ ಹೆಸರಾದ ಉಡುಪಿಯ ಆಚಾರ್ಯ ಏಸನಲ್ಲಿ ಆನಲೈನ್ ಮುಖಾಂತರ ತರಬೇತಿ ಪಡೆದ ಬೆಂಗಳೂರಿನ ಜಯನಗರದ ಕಾರ್ಮೆಲ್ ಕಾನ್ವೆಂಟ್ ವಿದ್ಯಾಲಯದ ಶಾರ್ವರಿ ಈ ಭಾರಿಯ 2019.20ರ ಎಸೆಸೆಲ್ಸಿ ಪರೀಕ್ಷೆಯಲ್ಲಿ 623 ಅಂಕವನ್ನು ಗಳಿಸಿರುತ್ತಾರೆ.


ಉಡುಪಿ ಮೂಲದ ಶ್ರೀ ವಾದಿರಾಜ ಪೆಜತ್ತಾಯ ಹಾಗೂ ಸಹನಾ ಪೆಜತ್ತಾಯ ಅವರ ಸುಪುತ್ರಿ ಶಾರ್ವರಿಯು ಉಡುಪಿಯ ಆಚಾರ್ಯ ಏಸ್ ರೂಪಿಸಿದ ಪಠ್ಯ ಪುಸ್ತಕ, ಕಾರ್ಯಾಗಾರ ಕ್ರಾಶ್ ಕೋರ್ಸ್ ಹಾಗೂ ಆನ್ ಲೈನ್ ತರಬೇತಿ ಪಡೆದಿದ್ದರು.
ಉತ್ತಮ ಕ್ರಿಕೆಟ್ ಆಟಗಾರಳೂ ಆಗಿರುವ ಶಾರ್ವಾರಿ 2019.20ರ ಕರ್ನಾಟಕ ರಾಜ್ಯದ ವಿಭಾಗೀಯ ಕಿರಿಯರ (ಅಂಡರ್.16) ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು ಅಧಿಕೃತವಾಗಿ ಪ್ರತಿನಿಧಿಸುತ್ತಿದ್ದು ಈಗಾಗಲೇ ಅನೇಕ ಪಂದ್ಯಗಳಲ್ಲಿ ಗಣನೀಯ ಪ್ರದರ್ಶನ ನೀಡಿದ್ದಾರೆ.

ಶೇಕಡಾ ನೂರು ಫಲಿತಾಂಶವನ್ನು ಪಡೆದಿದ್ದು ಎಂಟು ವಿದ್ಯಾರ್ಥಿಗಳು ಶೇಕಡಾ 95ಕ್ಕೂ ಮಿಕ್ಕಿ ಅಂಕ ಗಳಿಸಿದ್ದು 20 ವಿದ್ಯಾರ್ಥಿಗಳು ಶೇಕಡಾ 90ಕ್ಕೂ ಮಿಕ್ಕಿ ಅಂಕ ಗಳಿಸಿದ್ದಾರೆ.
ಆಚಾರ್ಯಸ್ ಏಸ್ ಸಂಸ್ಥೆಯ ನಿರ್ದೇಶಕ ಪಿ. ಲಾತವ್ಯ ಆಚಾರ್ಯ ಹಾಗೂ ಬ್ರಹ್ಮಾವರ ಏಸಿನ ನಿರ್ದೇಶಕ ಅಕ್ಷೊಭ್ಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply