ಕೋಟ-16,17ಕ್ಕೆ ಕೋಟ ಮಹತೋಭಾರ ಹಿರೇಮಹಾಲಿಂಗೇಶ್ವರ ಜಾತ್ರೋತ್ಸವ

ಕೋಟ: ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಕೋಟ ಇದರ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಇದೇ ಬರುವ 16ರಂದು ನಡೆಯಲಿದ್ದು ಆ ಪ್ರಯುಕ್ತ ಇಂದಿನಿ೦ದ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು 17ರ ತನಕ ಜರಗಲಿದೆ.

ಅನ್ನಸಂತರ್ಪಣೆ ಹಾಗೂ ರಥೋತ್ಸವದ ವಿಶೇಷ ಆಕರ್ಷಣೆಗಳು ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದದ ವತಿಯಿಂದ ನಡೆಯುವ 46ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮದ ಫೆ. 14ರಂದು ಸೋಮವಾರ ರಾತ್ರಿ 7.30ಕ್ಕೆ ರಿಧಂ ನೃತ್ಯತಂಡದವರಿಂದ ನೃತ್ಯ ವೈಭವ ಸುಗಮ ಸಂಗೀತ, ನಿರ್ದೇಶನ ಗಣೇಶ ಕಾರಂತ ಮತ್ತು ಮೂರ್ತಿ ಬೈಂದೂರು ನಿರ್ದೇಶನದ ಲಾವಣ್ಯ ಬೈಂದೂರು ಇವರಿಂದ ಹಾಸ್ಯಮಯ ನಾಟಕ ಕಿಷ್ಣ ಸಂಧಾನ ದಿನಾಂಕ 15ರಂದು ಮಂಗಳವಾರ ರಾತ್ರಿ 7.30ಕ್ಕೆ ಓಂಕಾರ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ನೂತನ ಶೈಲಿಯ ಹೊಸ ಕುಂದಗನ್ನಡದ ಹಾಸ್ಯಮಯ ನಗೆ ನಾಟಕ ಕಣ್ಣಾ ಮುಚ್ಚಾಲೆ ಅದೇ ದಿನ ಮಧ್ಯಾಹ್ನ 12.30ಕ್ಕೆ ಮುಗ್ಧ ಮಹಾಗಣಪತಿ ದೇವರ ಸನ್ನಿಧಾನದಲ್ಲಿ 1008 ಕಾಯಿ ಮೂಡುಗಣಪತಿ ಸೇವೆ ನಡೆಯಲಿರುವುದು.

ಭಕ್ತಾದಿಗಳಿಂದ ಕಾಯಿಯನ್ನು ಸ್ವೀಕರಿಸಲಾಗುವುದು.ಅದರ ಪ್ರಸಾದವನ್ನು ಫೆ. 16ರಂದು ಬುಧವಾರ ಮಧ್ಯಾಹ್ನ ಅನ್ನಸಂತರ್ಪಣೆಯಲ್ಲಿ ನಡೆಯಲಿದೆ ಸಂಜೆ ಶ್ರೀ ಮನ್ಮಹಾರಥೋತ್ಸವ, ವಿಶೇಷ ಆಕರ್ಷಣಿಗಳು ಕೀಲು ಕುದುರೆ, ಡೊಳ್ಳು ಕುಣಿತ, ಚಂಡೆವಾದನ, ಆರ್ಕೆಸ್ಟ್ರಾ ಬ್ಯಾಂಡ್ ಸೆಟ್, ಭಜನಾ ತಂಡ ಹಾಗೂ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರ ವೃಂದದಿಂದ ಸುಡುಮದ್ದು ಪ್ರದರ್ಶನ ನಡೆಯಲಿರುವುದು.

ರಾತ್ರಿ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳ ಪೆರ್ಡೂರು ಇವರಿಂದ ಯಕ್ಷಗಾನ ಬಯಲಾಟ ಕೃಷ್ಣ ಕಾದಂಬಿನಿ, 12ರAದು ರಾತ್ರಿ 7.30ಕ್ಕೆ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಕೃಷ್ಣ ಪಾರಿಜಾತ ಭಾಗವತಿಕೆ ಕುಮಾರಿ ಚಿಂತನ ಹೆಗ್ಡೆ, ಮಾಳ್ಕೊಡು ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 

Leave a Reply