Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಶ್ರೀಕೃಷ್ಣ ದರ್ಶನ ಭಾಗ್ಯ ಸಮಯ ವಿಸ್ತರಣೆ 

ಉಡುಪಿ ಶ್ರೀಕೃಷ್ಣ ಮಠದಲ್ಲಿ ಕೋವಿಡ್ 19ನಿಂದಾಗಿ ಭಕ್ತರಿಗೆ ಮಾರ್ಚ್ 22ರಿಂದ-ಸೆಪ್ಟಂಬರ್ 27ರವರೆಗೆ ದೇವರ ದರ್ಶನದ ವ್ಯವಸ್ಥೆಯನ್ನು ಕನಕನ ಕಿಂಡಿಯಲ್ಲಿ ಮಾಡಲಾಗಿತ್ತು. ನಂತರ ಪರ್ಯಾಯ ಪೀಠಾಧಿಪತಿ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸೆಪ್ಟೆಂಬರ್ 28ರಿಂದ ಮಧ್ಯಾಹ್ನ 2.00ರಿಂದ ಸಂಜೆ 5.00 ಗಂಟೆಯವರೆಗೆ ಶ್ರೀಕೃಷ್ಣನ ದರ್ಶನದ ವ್ಯವಸ್ಥೆಯನ್ನು ಭಕ್ತರಿಗೆ ಶ್ರೀಮಠದ ಒಳಭಾಗದಲ್ಲಿ ಅವಕಾಶವನ್ನು ಕಲ್ಪಿಸಿದರು. 
ಈಗ ಸ್ಥಳೀಯ ಹಾಗೂ ಪರವೂರ ಭಕ್ತರ ಅನುಕೂಲಕ್ಕಾಗಿ ದೇವರ ದರ್ಶನದ ಸಮಯದಲ್ಲಿ ಇನ್ನೂ ಬದಲಾವಣೆ  ಮಾಡಲಾಗಿದೆ. ಅದರಂತೆ ನವೆಂಬರ್ 4ರಿಂದ ಬೆಳಿಗ್ಗೆ 8.30 ರಿಂದ ಬೆಳಿಗ್ಗೆ 10.00 ರವರೆಗೆ ಹಾಗೂ ಈ ಹಿಂದಿನಂತೆ ಮಧ್ಯಾಹ್ನದ ಸಮಯ ವನ್ನು 2.00 ರಿಂದ ಸಂಜೆ 5.00ರ ಬದಲು 6:00 ಗಂಟೆವರೆಗೆ ವಿಸ್ತರಿಸಿ, ಭಕ್ತಾದಿಗಳಿಗೆ ಹೆಚ್ಚು ಅನುಕೂಲವಾಗುವಂತೆ ಶ್ರೀಕೃಷ್ಣನ ದರ್ಶನ ಭಾಗ್ಯ ಲಭಿಸುವ  ಅವಕಾಶವನ್ನು ಪರ್ಯಾಯ ಶ್ರೀಪಾದರು ಕಲ್ಪಿಸಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!