Janardhan Kodavoor/ Team KaravaliXpress
28 C
Udupi
Thursday, December 3, 2020

 ಮಟ್ಟು ​ವಿಷ್ಣುಮೂರ್ತಿ ​ದೇವಸ್ಥಾನದಲ್ಲಿ​ ” ಶ್ರೀ ರಾಮ ಸತ್ರ”  ​​

ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ಭವ್ಯ ಶ್ರೀರಾಮ ಮಂದಿರ ಕಾರ್ಯವು ಸುಗಮವಾಗಿ ನೇರವೇರಲಿ ಎಂಬ ಸಂಕಲ್ಪದೊಂದಿಗೆ ದಿನಾಂಕ 13-04-2021ರಿಂದ  ದಿನಾಂಕ 22-04-2021 ರ ತನಕ ಮಟ್ಟು ​ವಿಷ್ಣುಮೂರ್ತಿ ​ದೇವಸ್ಥಾನದಲ್ಲಿ ವಿಜ್ರಂಭಣೆಯಿಂದ ರಾಮನವಮಿಯನ್ನು ” ಶ್ರೀ ರಾಮ ಸತ್ರ”​ ​ಎಂಬುದಾಗಿ ಆಚರಿಸುವುದೆಂದು ನಿಶ್ಚಯಿಸಿ​ಸಲಾಗಿದೆ. 
ಪಲಿಮಾರು ಮಠದ ಯತಿದ್ವಯರು ದಶ ದಿನಗಳ ಪರ್ಯಂತ  ದೇವಳದಲ್ಲಿ ಪಟ್ಟದ ದೇವರಾದ ಹನುಮತ್ಸೇವಿತ ಸೀತಾ ಲಕ್ಷ್ಮಣ ಸಹಿತ ಶ್ರೀ ರಾಮಚಂದ್ರ ದೇವರ ಪೂಜಾದಿಗಳನ್ನು ನೆರವೇರಿಸುವುದಲ್ಲದೆ , ರಾಮತಾರಕ ಜಪ, ಹೋಮ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತದೆ. 
ಈ ಪ್ರಯುಕ್ತ ಪೂರ್ವಭಾವಿಯಾಗಿ ಕಾರ್ಯಕ್ರಮದ ಮನವಿ ಪತ್ರವನ್ನು ಪರ್ಯಾಯ ಅದಮಾರು ಮಠದ ಹಿರಿಯ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ​ತಮ್ಮ ​ಅಮೃತ ಹಸ್ತದಿಂದ ​ಮಂಗಳವಾರ ದಂದು ಅದಮಾರು ಮಠದಲ್ಲಿ ಬಿಡುಗಡೆಗೊಳಿ​ಸಿದರು.

ಈ ಸಂಧರ್ಭದಲ್ಲಿ ಈ ಸಂದರ್ಭದಲ್ಲಿ ದೇವಳದ ಪ್ರಧಾನ ತಂತ್ರಿ ಮತ್ತು ಶ್ರೀರಾಮ ಸತ್ರ ಸಮಿತಿಯ ಅಧ್ಯಕ್ಷ ಮಟ್ಟು ಪ್ರವೀಣ್ ತಂತ್ರಿ, ಮಟ್ಟು ದೇವಳದ ಧರ್ಮದರ್ಶಿ ಹಾಗು ರಾಮ ಸತ್ರ ಸಮಿತಿಯ  ಕಾರ್ಯಾಧ್ಯಕ್ಷ  ಲಕ್ಷ್ಮೀ ನಾರಾಯಣ ರಾವ್ ಮಟ್ಟು,  ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ​ಮೊಕ್ತೇಸರ ಜನಾರ್ದನ್ ಕೊಡವೂರು​, ​ ಡಾ ಅನಂತ ಹೆಬ್ಬಾರ್, ರಾಘವೇಂದ್ರ ರಾ​​ವ್,  ಶ್ರೀಕಾಂತ ಆಚಾರ್ಯ ಪ್ರವೀಣ್ ಶೇರಿಗಾರ್, ಹರ್ಷಿತ್  ಮಟ್ಟು ಅವರು ಉಪಸ್ಥಿತರಿದ್ದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಪಣಂಬೂರಿನಲ್ಲಿ ಸಚಿವರಿಂದ ಪೊಲೀಸ್ ವಸತಿ ಗೃಹಗಳ ಉದ್ಘಾಟನೆ

ಮಂಗಳೂರು: ಪೊಲೀಸ್ ವಸತಿ ಯೋಜನೆ 2020ರ ಅಡಿಯಲ್ಲಿ ಮಂಗಳೂರು ನಗರ ಪೊಲೀಸ್ ಸಿಬ್ಬಂದಿಗಾಗಿ ಪಣಂಬೂರಿನಲ್ಲಿ ರೂ.21.57 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಪೊಲೀಸ್ ವಸತಿ ಗೃಹಗಳನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ...

‘ಪೊರ್ಲುಡೆ ಪೊರ್ಲು ನಮ್ಮ ತುಳುನಾಡು’~ತುಳು ಲಿಪಿ ಪರೀಕ್ಷೆ 

ಮಲ್ಪೆ~ ​‘ಪೊರ್ಲುಡೆ ಪೊರ್ಲು ನಮ್ಮ ತುಳುನಾಡು’. ತುಳುವರ ಮಾತೃಭಾಷೆ ತುಳು. ಈ ಸುಂದರ​ಭಾಷೆಯನ್ನು ಎಷ್ಟು ಬಣ್ಣಿಸಿದರೂ ಸಾಲದು. ಮೇರು ಮಟ್ಟದ ಇತಿಹಾಸ ಇರುವ ತುಳುಭಾಷೆಗೆ ಸ್ವಂತ ಲಿಪಿ ಇದೆ​ಎಂದು ಡಾ|ವೆಂಕಟರಾಜ ಪುಣಿಂಚಿತ್ತಾಯರು ತಮ್ಮ...

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದ್ರವರೂಪದ ಆಮ್ಲಜನಕ ಸ್ಥಾವರ ಉದ್ಘಾಟಿಸಿದ ಸಚಿವ ಬೊಮ್ಮಾಯಿ

ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾದ ದ್ರವರೂಪದ ಆಮ್ಲಜನಕದ ಸ್ಥಾವರ (ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್)ನ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಗುರುವಾರ ನೆರವೇರಿಸಿದರು.50ಲಕ್ಷ ರೂ. ವೆಚ್ಚದಲ್ಲಿ...

ಕೃಷ್ಣ ಮಠದಲ್ಲಿ ಕನ್ನಡ ನಾಮ ಫಲಕ ಅಳವಡಿಕೆ~ಜಿಲ್ಲಾ ಕಸಾಪ ಹರ್ಷ 

ಗೋಪುರದ ಮೇಲ್ಭಾಗದಲ್ಲಿ ಕನ್ನಡ ನಾಮಫಲಕ ಅಳವಡಿಸಲಾಗಿದೆ. ಇದು ಅಪಾರ ಕನ್ನಡಾಭಿಮಾನಿಗಳಿಗೆ ಸಮಾಧಾನ ತಂದಿದೆ.‌  ಕೃಷ್ಣ ಮಠದಲ್ಲಿ ಕನ್ನಡ ನಾಮ ಫಲಕ ಅಳವಡಿಕೆಯಾಗಿದೆ. ಕೃಷ್ಣಮಠದ ಮುಂದಿನ ಮುಖ್ಯ ದ್ವಾರದಲ್ಲಿ ವಿಶ್ವಗುರು ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ...

  ಎಸ್ ಕೆಪಿಎ ಮಂಗಳೂರು ವಲಯದ ವತಿಯಿಂದ ​ವಕೀಲರ ದಿನಾಚರಣೆ 

ಎಸ್ ಕೆಪಿಎ ಮಂಗಳೂರು ವಲಯದ ವತಿಯಿಂದ ವಕೀಲರ ದಿನಾಚರಣೆಯ ಅಂಗವಾಗಿ ಎಸ್ ಕೆಪಿಎ ಕಾನೂನು ಸಲಹೆಗಾರರಾದ ಜಗದೀಶ್ ಶೇಣವ ಇವರನ್ನು ನವಭಾರತ್ ಸರ್ಕಲ್ ಬಳಿ ಇರುವ ಅವರ ಕಚೇರಿಯಲ್ಲಿ  ಅಭಿನಂದಿಸಲಾಯಿತು.   ಗೌರವಾಧ್ಯಕ್ಷ  ಜಗನ್ನಾಥ ಶೆಟ್ಟಿ, ಮಾಜಿ  ಜಿಲ್ಲಾ...
error: Content is protected !!