ಶ್ರೀವಿಶ್ವೋತ್ತಮ ತೀರ್ಥ ಶ್ರೀಪಾದಂಗಳವರ ಆರಾಧನಾ ಪ್ರಯುಕ್ತ ವಿಶೇಷ ಪೂಜೆ

ಪರಮಪೂಜ್ಯ ಶ್ರೀವಿಶ್ವೋತ್ತಮ ತೀರ್ಥ ಶ್ರೀಪಾದಂಗಳವರ ಆರಾಧನಾ ಪ್ರಯುಕ್ತ ಅವರ ಮೂಲವೃಂದಾವನಕ್ಕೆ ವಿಶೇಷ ಪೂಜೆಯನ್ನು ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ನಡೆಸಿದರು. ನಂತರ ಭೀಮನಕಟ್ಟೆ ಮಠಾಧೀಶರಾದ ಶ್ರೀರಘುವರೇಂದ್ರ ತೀರ್ಥರ ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ ಗುರುಸಂಸ್ಮರಣಾ ಕಾರ್ಯಕ್ರಮ ನಡೆಯಿತು. ವಿದ್ವಾಂಸರಾದ ನಿಪ್ಪಾಣಿ ಶ್ರೀಗುರುರಾಜ ಆಚಾರ್ಯರು ಹಾಗೂ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ರವರು ಗುರುಸಂಸ್ಮರಣೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಭೀಮನಕಟ್ಟೆ ಮಠದಿಂದ ಪ್ರಕಾಶನಗೊಂಡ ನಿಪ್ಪಾಣಿ ಗುರುರಾಜ ಆಚಾರ್ಯರು ಅನುವಾದಿಸಿದ ಶ್ರೀರಘುಪ್ರವೀರ ತೀರ್ಥರ ಸ್ವಾಪ್ನವೃಂದಾವನಾಖ್ಯಾನ ಪ್ರಾಮಾಣ್ಯ ಪ್ರಬೋಧನಮ್ ಎಂಬ ಪುಸ್ತಕವನ್ನು ಹಾಗೂ ಉತ್ತನೂರು ಶ್ರೀನಿಧಿ ಆಚಾರ್ಯರು ಸಂಪಾದಿಸಿದ ಸಚ್ಛ್ರವಣ ಭೂಷಣ ಎಂಬ ಕೃತಿಯನ್ನು ಯತಿತ್ರಯರು ಬಿಡುಗಡೆಗೊಳಿಸಿ ಆರಾಧನಾ ಸಂದೇಶ ನೀಡಿದರು.

Leave a Reply