ಕುಂಭಾಶಿ: ಮಧ್ವಮತದ ಹಿರಿಮೆ-ಗರಿಮೆಯ ಕುರಿತು ಸಂವಾದ ಹಾಗು ಗುರುರಾಜರ ಮಾತಿನಲ್ಲಿ ಮಧ್ವರಾಜರು ಮತ್ತು ದಾಸಸಾಹಿತ್ಯಕ್ಕೆ ಗುರುರಾಜರ ಕೊಡುಗೆ ಎಂಬ ವಿಷಯದಲ್ಲಿ ಉಪನ್ಯಾಸ

ಪ್ರಾತಃ ಸ್ಮರಣೀಯರಾದ ಶ್ರೀ ಶ್ರೀ ವಿಶ್ವೋತ್ತಮತೀರ್ಥ ಶ್ರೀಪಾದರಿಂದ ಸ್ಥಾಪಿಸಲ್ಪಟ್ಟ “ಭಾವಿಸಮೀರ ಗುರು ಕುಲದ”ದ ವಿದ್ಯಾರ್ಥಿಗಳಿಗೆ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಅನುಗ್ರಹದಿಂದ ನಡೆಯುತ್ತಿರುವ ಶ್ರೀಮದನುವ್ಯಾಖ್ಯಾನ ಸಹಿತ ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಗ್ರಂಥಗಳ ಮಂಗಲ ಮಹೋತ್ಸವ ಹಾಗೂ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಜಯಂತ್ಯುತ್ಸವವು ಕುಂಭಾಸಿಯ ಸೋದೆ ವಾದಿರಾಜ ಮಠದ ಆವರಣದಲ್ಲಿ ನಡೆಯುತ್ತಿದೆ.   
ವಿದ್ವಾಂಸರಾದ ಹರಿದಾಸ ಭಟ್ ಹಾಗೂ ಶ್ಯಾಮಸುಂದರಾಚಾರ್ಯ ಬಂಡಿ ಇವರಿಂದ ಮಧ್ವಮತದ ಹಿರಿಮೆ-ಗರಿಮೆಯ ಕುರಿತು ಸಂವಾದ ಗುರುರಾಜರ ಮಾತಿನಲ್ಲಿ ಮಧ್ವರಾಜರು ಎಂಬ ವಿಷಯದಲ್ಲಿ  ಮಂತ್ರಾಲಯ ವಾದಿರಾಜಾಚಾರ್ಯರಿಂದ ಹಾಗೂ ದಾಸಸಾಹಿತ್ಯಕ್ಕೆ ಗುರುರಾಜರ ಕೊಡುಗೆ ಎಂಬ ವಿಷಯದಲ್ಲಿ ಮಾನಕರಿ ಶ್ರೀನಿವಾಸಾಚಾರ್ಯರಿಂದ ಉಪನ್ಯಾಸ ನಡೆಯಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು,  ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಚಿತ್ರಾಪುರ ಮಠದ ಶ್ರೀವಿದ್ಯೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಿದರು.
 
 
 
 
 
 
 
 
 
 
 

Leave a Reply