ಕೊಡವೂರು ದೇವಳದ ಸಾಮಾಜಿಕ ಕಾರ್ಯಕ್ಕೆ ಸರ್ವತ್ರ ಶ್ಲಾಘನೆ 

ಉಡುಪಿಯಲ್ಲಿ 2-3 ದಿನಂದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಭಾನುವಾರದಂದು ಇಂದ್ರಾಣಿ ನದಿ ಉಕ್ಕಿ ಹರಿದಾಗ ಕೊಡವೂರಿನ ಇಂದ್ರಾಣಿ ನದಿ ಬದಿಯಿರುವ ಜನರು ದಿಕ್ಕು ತೋಚದಂತಾಗಿ ಕುಳಿತಿದ್ದರು.  ನೀರು ಏರುತ್ತಲೇ ಇರುವುದನ್ನು ಮನಗಂಡು ಕೊಡವೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಬೆಳಿಗ್ಗೆ 5.30ಕ್ಕೆ  ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದರು.  ನಗರಸಭಾ ಸದಸ್ಯ ವಿಜಯ ಕೊಡವೂರು ಹಾಗು ಗೆಳೆಯರ ತಂಡ ಇಡೀ ದಿನ ಕಾರ್ಯಾಚರಣೆಯಲ್ಲಿ ತೊಡಗಿತ್ತು. 
ಸಾಮಾಜಿಕ ಕಾರ್ಯ  ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕೊಡವೂರು ದೇವಳದ ವ್ಯವಸ್ಥಾಪನಾ ಸಮಿತಿ  ಗ್ರಾಮದಲ್ಲಿರುವ  ನೆರೆ ಪೀಡಿತರಿಗೆ ಗಂಜಿ ಕೇಂದ್ರವನ್ನು ತೆರೆಯಿತು. ರಾತ್ರಿ ಉಳಿದು ಕೊಳ್ಳಲು ಕೂಡ ವ್ಯವಸ್ಥೆಯನ್ನು ಮಾಡಿತ್ತು. ಭಾನುವಾರ ಹಾಗು ಸೋಮವಾರ ಕಾಫಿ ತಿಂಡಿ ಹಾಗು ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.  ಗ್ರಾಮದ ಜನರು ಜನ ಕಷ್ಟದಲ್ಲಿ ಇರುವಾಗ ಅವರೊಂದಿಗೆ ದೇವಳದ ಆಡಳಿತ ಮಂಡಳಿ ಕೈಜೋಡಿಸಿದ್ದು ಪ್ರಶಂಸೆಗೆ ಪಾತ್ರವಾಯಿತು.  
ಅಧಿಕ ಮಾಸ ವೃತಾಚರಣೆ :  21.09.2020 ಸೋಮವಾರದಿಂದ ಮೊದಲ್ಗೊಂಡು 28/9, 05/10 ಹಾಗು12/10 ಪ್ರತೀ ಸೋಮವಾರದವರೆಗೆ ಸಾಮೂಹಿಕವಾಗಿ ಅಧಿಕ ಮಾಸ ವೃತಾಚರಣೆಯನ್ನು ಶ್ರೀದೇವಳದಲ್ಲಿ ಹಮ್ಮಿ ಕೊಳ್ಳಲಾಗಿದೆ.
ಇಂದು ಹಲವಾರು ಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಕೃತಾರ್ಥರಾಗಿದ್ದಾರೆ.  ಪೂಜೆಯ ಬಳಿಕ ವಸಂತರಾಧನೆ, ಪ್ರಸಾದ ವಿತರಣೆ ನಡೆಯಿತು   
 
 
 
 
 
 
 
 
 
 
 

Leave a Reply