Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಪರಿಶುದ್ಧ ಮನಸ್ಸಿನ  ಸಂಕಲ್ಪದಿಂದ  ಕಾರ್ಯಸಿದ್ಧಿ ~ ಕಾಂತಪ್ಪ ಕರ್ಕೇರ ಮಲ್ಪೆ 

ಪರಿಶುದ್ಧ ಮನಸ್ಸಿನ ಸಂಕಲ್ಪದಿಂದ, ಲೋಕ ಕಲ್ಯಾಣಾರ್ಥವಾಗಿ ಮಾಡುವ ಪುಣ್ಯ ಪ್ರದವಾದ ಧಾರ್ಮಿಕ ಕಾರ್ಯಗಳಿಂದ ದೇವತಾನುಗ್ರಹ ಪ್ರಾಪ್ತಿಯಾಗಿ ಧನ್ಯತಾ ಭಾವ ಮೂಡುವುದು. ಆ ನಿಟ್ಟಿನಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ನಡೆಯಲಿರುವ  ರಾಶಿಪೂಜಾ ಮಹೋತ್ಸವದಲ್ಲಿ ನಾವೆಲ್ಲ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಯಶಸ್ಸಿಗೆ ಶ್ರಮಿಸೋಣ ಎಂದು ಮೀನುಗಾರರ ಹಿರಿಯ ಮುಂದಾಳು ಕಾಂತಪ್ಪ ಕರ್ಕೇರ ರವರು ಹೇಳಿದರು. 
ಅವರು ಕೊಡವೂರು ಶ್ರೀ ಶಂಕರನಾರಾಯಣ ದೇಗುಲದಲ್ಲಿ 2021ರ ಫೆಬ್ರವರಿ 4 ರಂದು ನಡೆಯಲಿರುವ ರಾಶಿಪೂಜಾ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ನಡೆದ ಗ್ರಾಮಸ್ಥರ ಸಭೆಯಲ್ಲಿ ಅವರು ಮಾತನಾಡಿದರು. ದೇವಳದ ಪ್ರಧಾನ ತಂತ್ರಿ ವೇದಮೂರ್ತಿ ಪುತ್ತೂರು ಹಯವದಸ ತಂತ್ರಿಗಳು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಶುಭ ಹಾರೈಸಿದರು. ಶ್ರೀ ಶಂ ಭಕ್ತವ್ರಂದದ ಅಧ್ಯಕ್ಷ ರವಿರಾಜ್ ಹೆಗ್ಡೆ, ನಗರಸಭಾ ಸದಸ್ಯ ವಿಜಯ ಕೊಡವೂರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 
ವೇದಮೂರ್ತಿ ಮಧುಸೂದನ ತಂತ್ರಿ, ನಗರಸಭಾ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ, ಮತ್ಸ್ಯೋದ್ಯಮಿಗಳಾದ ಸಾಧು ಸಾಲ್ಯಾನ್, ಆನಂದ ಪಿ.ಸುವರ್ಣ, ನಾಗರಾಜ್ ಸುವರ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಡಿಗ ಕ್ರಷ್ಣ ಮೂರ್ತಿ ಭಟ್, ಭಾಸ್ಕರ್ ಪಾಲನ್, ರಾಜ.ಎ. ಸೇರಿಗಾರ್. ಚಂದ್ರಕಾಂತ್ ಪುತ್ರನ್, ಬಾಬ.ಕೆ‌, ಸುಧಾ ಎನ್ ಶೆಟ್ಟಿ, ಮುಂದಾಳುಗಳಾದ ಕೆ.ಟಿ.ಪೂಜಾರಿ, ಕೆ.ಕಾಳು ಸೇರಿಗಾರ್. 
ಟಿ.ಚಂದ್ರಶೇಖರ್, ಗೋವಿಂದ ಐತಾಳ್, ಶಿವಪ್ಪ ಟಿ ಕಾಂಚನ್, ಶೇಷಪ್ಪ ಕುಂದರ್, ಶ್ರೀನಿವಾಸ ಬಾಯರಿ,ರಾಮ ಸೇರಿಗಾರ್, ಕೋದಂಡರಾಮ ಭಟ್, ಸುರೇಶ್ ಕುಡಾರ್ ತೋಟ, ಕ್ರಷ್ಣ ಎಸ್ ಅಮೀನ್, ರಮೇಶ್ ಶೆಟ್ಟಿ ಮೂಡುಬೆಟ್ಟು, ರತ್ನಾಕರ್ ಕೋಟ್ಯಾನ್, ಚಂದ್ರಕಾಂತ್ ಶೆಟ್ಟಿಗಾರ್, ಶಕುಂತಳಾ ಸದಾನಂದ್, ಸರೋಜಿನಿ ವಿಜಯ್, ಸುಶೀಲ್ ಜಯಕರ್ ಉಪಸ್ಥಿತರಿದ್ದರು. 
ಸಭೆಯ ಕೊನೆಯಲ್ಲಿ ರಾಶಿಪೂಜಾ ಮಹೋತ್ಸವಕ್ಕೆ ಸಾಂಕೇತಿಕವಾಗಿ ಹುಂಡಿ ಹಣ ಸಮರ್ಪಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಸ್ವಾಗತಿಸಿದರು. ಸದಸ್ಯ  ಜನಾರ್ದನ್ ಕೊಡವೂರು ಪ್ರಸ್ತಾವನೆಗೈದರು.  ಸತೀಶ್ ಕೊಡವೂರು ನಿರೂಪಿಸಿದರು. ಬಾಲಕೃಷ್ಣ ಕೊಡವೂರ  ವಂದಿಸಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!