ಸಂಸ್ಕೃತ ಗ್ರಾಮದಲ್ಲಿ ಕೋಟಿಗೀತಾಲೇಖನಯಜ್ಞದ ಅಭಿಯಾನ

ವಿಶ್ವದಲ್ಲಿ ಸಂಸ್ಕೃತ ಗ್ರಾಮವೆಂದು ಸುಪ್ರಸಿದ್ಧವಾದ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮದಲ್ಲಿ ಕೋಟಿಗೀತಾಲೇಖನಯಜ್ಞದ ಅಭಿಯಾನ ಅತ್ಯಂತ ವೈಭವದಿಂದ ನಡೆಯಿತು. ಶ್ರೀಪ್ರಾಚೇತಸ ಶ್ರೌತವಿದ್ಯಾ ಸಂವರ್ಧಿನೀ ವಿಶ್ವಸ್ಥ ಮಂಡಳಿಯ ಸಂಸ್ಥಾಪಕರಾದ ಹಾಗೂ ಅಗ್ನಹೋತ್ರಿಗಳಾದ ಡಾ. ಸನತ್ಕುಮಾರ ಸೋಮಯಾಜಿ ಇವರ ನೇತೃತ್ವದಲ್ಲಿ ನಡೆದ ಅಭಿಯಾನವನ್ನು ಮತ್ತೂರಿನ ಶ್ರೀಜಾನಕೀರಾಮ ಆಶ್ರಮದ ಪರಮಪೂಜ್ಯ ಶ್ರೀ ಶ್ರೀ ಬೋಧಾನಂದೇಂದ್ರಸರಸ್ವತೀ ಮಹಾಸ್ವಾಮಿಗಳು ಚಾಲನೆ ನೀಡಿದರು. ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಸಂಕಲ್ಪಿಸಿರುವ ಕೋಟಿಗೀತಾಲೇಖನಯಜ್ಞ ಯೋಜನೆಯು ಯಶಸ್ವಿಯಾಗಲಿ ಎಂದು ಹಾರೈಸಿದರು. ತಮ್ಮ ಅಪಾರ ಶಿಷ್ಯರಿಗೂ ದೀಕ್ಷೆಯನ್ನು ನೀಡುವುದಾಗಿಯೂ ತಿಳಿಸಿ ಪುತ್ತಿಗೆ ಶ್ರೀಪಾದರ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

 
 
 
 
 
 
 
 
 

Leave a Reply