ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಡಗರ

ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಪ್ರಿಲ್ 8 ರಿಂದ 11 ನೇ ತಾರೀಖಿನ ವರೆಗೆ ನವನಿರ್ಮಿತ ಶ್ರೀ ನಾಗದೇವರ ಗುಡಿ ಸಮರ್ಪಣೆ, ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವವು ಪಾಡಿಗಾರು ಶ್ರೀ ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿರುವುದು .

ತದಂಗವಾಗಿ ಈ ನಾಲ್ಕೂ ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು , ಧರ್ಮಸಭೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ​. ನಿತ್ಯ ಸಂಜೆ ನಡೆಯುವ ಧರ್ಮಸಭೆಗಳಲ್ಲಿ ಅನೇಕ ಮಠಾಧೀಶರು , ಮಂತ್ರಿಗಳು , ಜನಪ್ರತಿನಿಧಿಗಳು , ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ಸಂದೇಶ ನೀಡಲಿರುವರು .​ ಆ ಬಳಿಕ ನಡೆಯುವ  ಸಾಂಸ್ಕೃತಿಕ  ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಭಾಗವಹಿಸಿ ಕಲಾಪ್ರದರ್ಶನ ನೀಡುವರು .

7 ನೇ ತಾರೀಖು ಗುರುವಾರ  ಸಂಜೆ 5 ಕ್ಕೆ ಹೊರೆಕಾಣಿಕೆ ಮೆರವಣಿಗೆಯು ಉಡುಪಿ ಕೃಷ್ಣ ಮಠದ ರಾಜಾಂಗಣದ ಬಳಿಯಿಂದ ಹೊರಡಲಿದ್ದು ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಚಾಲನೆ ನೀಡಲಿರುವರು .‌​ 11 ನೇ ತಾರೀಖು ಸೋಮವಾರ ಬೆಳಿಗ್ಗೆ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ನಾಗದೇವರ ಗುಡಿಯಲ್ಲಿ ಶ್ರೀ ನಾಗದೇವರ ಪ್ರತಿಷ್ಠೆ ಬ್ರಹ್ಮಕಲಶೋತ್ಸವಗಳು ನಡೆಯಲಿವೆ . ಬಳಿಕ ಸಾರತವಜನಿಕ ಅನ್ನ ಸಂತರ್ಪಣೆ ಇದೆ .‌ ಅಂದು ರಾತ್ರಿ ಪುಷ್ಪಾಲಂಕೃತ ಮಂಟಪದಲ್ಲಿ ನಾಗಮಂಡಲೋತ್ಸವವು ನೆರೆವೇರಲಿದೆ .‌ಎಪ್ರಿಲ್ 9 ರಂದು ಧರ್ಮಸಭೆಗೆ  ಮುಖ್ಯಮಂತ್ರಿ ಹಾಗೂ ಡಾ ಹೆಗ್ಗಡೆ

ಎಪ್ರಿಲ್ 9 ಶನಿವಾರ ಸಂಜೆ ನಡೆಯುವ ಧರ್ಮಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಎಸ್ ಬೊಮ್ಮಾಯಿಯವರು ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೆಂದ್ರ ಹೆಗ್ಗಡೆಯವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸುವರು .​  ಎಪ್ರಿಲ್ 8 ರಂದು ಸಂಜೆ 5 ಕ್ಕೆ ಏಕ್ ಭಾರತ್ ಶ್ರೇಷ್ಠ್ ಭಾರತ್ : ಚಕ್ರವರ್ತಿ ಸೂಲಿಬೆಲೆ ಯವರಿಂದ ವಿಶೇಷ ಭಾಷಣವಿದೆ .​  ಎ.‌8 ರಂದು ರಾತ್ರಿ ಕಟೀಲು ಮೇಳದ ಕಲಾವಿದರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ , 9 ರಂದು  ನೃತ್ಯ ನಿಕೇತನ ಕಪಡವೂರು ಇವರಿಂ  ನಾರಸಿಂಹ ನೃತ್ಯರೂಪಕ ಎ. 10 ರಂದು ಸಭಾ ಕಾರ್ಯಕ್ರಮದ ಬಳಿಕ ಕುಮರೇಶನ್ ವಯಲಿನ್ ವಾದನ‌ವೈಭವ , 11 ರಂದು ಮಲ್ಲಾಡಿ  ಸಹೋದರರಿಂದ ಕರ್ನಾಟಕ ಶಾಸ್ತ್ರೀಯ  ಸಂಗೀತ ನಡೆಯಲಿದೆ .

ಧಾರ್ಮಿಕ ಪ್ರವಚನ ಎಪ್ರಿಲ್ 9 ರಂದು ಪುರಾಣಗಳಲ್ಲಿ ನಾಗದೇವರು ಹಾಗೂ ಮತ್ತು 10ರಂದು ರಾಮನವಮೀ ಪ್ರಯುಕ್ತ ಆದರ್ಶ ರಾಮ   ಪ್ರಸಿದ್ಧ ವಿದ್ವಾಂಸ ಎ ಹರಿದಾಸ ಭಟ್ಟರಿಂದ ಪ್ರವಚನ ಕಾರ್ಯಕ್ರಮ ಇದೆ .​ ಈ ಎಲ್ಲಾ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸುವಂತೆ ಆಹ್ವಾಮಿಸುತ್ತಿದ್ದೇವೆ .‌ಮತ್ತು ತಮ್ಮ ವಿಶೇಷವಾಗಿ ವಿನಂತಿಸುತ್ತೇವೆ .

ಭಕ್ತ​ ​ಬಂಧುಗಳೇ ,

ಭಗವಂತನ ಕೃಪೆ ಮತ್ತು ತಮ್ಮಂಥಹ ಊರ ಪರವೂರ ಹತ್ತು ಸಮಸ್ತ ಭಕ್ತರ  ಶ್ರದ್ಧಾಪೂರ್ವಕ ಸಹಕಾರ ಮತ್ತು ಸಹಯೋಗ ವಿಶೇಷದಿಂದ ಶ್ರೀ ಕ್ಷೇತ್ರವು ಕಳೆದ ಸುಮಾರು ನಾಲ್ಕು ಶತಮಾನಗಳಿಂದೀಚೆಗೆ ನಾಡಿನ ಕರಾವಳಿ ಭಾಗದ ಅತ್ಯಂತ ಪ್ರಸಿದ್ಧವಾದ ಸ್ಕಂದಾಲಯವಾಗಿ ಬೆಳೆದು ನಿಂತಿರುವುದಕ್ಕೆ ತುಂಬು ಸಂತಸವನ್ನು ವ್ಯಕ್ತ ಪಡಿಸುತ್ತೇವೆ .

ಭಾವೀಸಮೀರ ಶ್ರೀ ವಾದಿರಾಜ ಗುರುಸಾರ್ವಭೌಮರು  ಸಾಮಗ ಮನೆತನಕ್ಕೆ ನಾಗಾರಾಧನೆಗೈಯುವ ವಿಶೇಷ ಅನುಗ್ರಹವನ್ನು ದಯಪಾಲಿಸಿ ಸುವರ್ಣ ನಾಗಫಣವನ್ನು ನೀಡಿ ನಾಗದರ್ಶನ ಸೇವೆ ನಡೆಸಿಕೊಂಡು ಬರಬೇಕೆಂದೂ ಆ ಸಂದರ್ಭದಲ್ಲಿ ಸಾಮಗರು ಭಕ್ತರಿಗೆ ನೀಡುವ ಅಭಯವಾಕ್ಯ ಸತ್ಯವಾಗಲೆಂದೂ ಆಶೀರ್ವದಿಸಿದ್ದಾರೆ .‌ಅದರಂತೆ ಸಾಮಗ ಮನೆತನದವರು ಲಾಗಾಯ್ತಿನಿಂದ ನಾಗದರ್ಶನ ನಾಗಮಂಡಲೋತ್ಸವಗಳಲ್ಲಿ ಭಾಗಿಯಾಗಿ ಭಕ್ತರನ್ನು ಅನುಗ್ರಹಿಸುವ ಅವಕಾಶಪಡೆದುಕೊಂಡು ಪ್ರಸಿದ್ಧರಾಗಿದ್ದಾರೆ

ಹಲವಾರು ಆಸ್ತಿಕ ಮಹನೀಯರ ಹತ್ತಾರು ಕಷ್ಟ ಕಾರ್ಪಣ್ಯಗಳು ಮತ್ತು ದುಃಖ ದುಮ್ಮಾನಗಳಿಗೆ ಶ್ರೀ ಸ್ವಾಮಿಯ ಕಾರುಣ್ಯದಿಂದ ಯೋಗ್ಯ ಪರಿಹಾರ ದೊರೆತು ಶಾಂತಿ ನೆಮ್ಮದಿ , ಸಾಂತ್ವನ ಸಮಾಧಾನಗಳು ಲಭಿಸುವ ತಾಣ ವಾಗಿಯೂ ಸರ್ವವೇದ್ಯವಾಗಿದೆ .‌​ ಪ್ರಸ್ತುತ ಶ್ರೀ ಸನ್ನಿಧಿಯಲ್ಲಿ ಶಿಥಿಲವಾಗಿದ್ದ ಶ್ರೀ ನಾಗದೇವರ ಗುಡಿಯನ್ನು ಪುನರ್ನಿಮಿಸುವ ಸಂಕಲ್ಪ ಮಾಡಿದ್ದೆವು , ದೇವರ ದಯೆ , ಗುರುಹಿರಿಯರ ಆಶೀರ್ವಾದ ಹಾಗೂ ಅನೇಕ ಭಕ್ತರ ಉದಾರ ನೆರವಿನಿಂದ ಸುಮಾರು 2.25 ಕೋಟಿ ರೂ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ಗುಡಿಯನ್ನು ಅತ್ಯಲ್ಪ ಅವಧಿಯಲ್ಲಿ ನಿರ್ಮಿಸಿರುವುದು ಅತಿಶಯದ ವಿಷಯವೇ ಆಗಿದೆ .

ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು , ಗೌರವಾಧ್ಯಕ್ಷರು
ಬ್ರಹ್ಮಕಲಶೋತ್ಸವ ನಾಗಮಂಡಲೋತ್ಸವ ಸಮಿತಿ​.  ​

​ಈ ಸಂದರ್ಭದಲ್ಲಿ ಕೆ ರಘುಪತಿ ಭಟ್ ​, ​  ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರ, ​ಪಾಡಿಗಾರು ಶ್ರೀನಿವಾಸ ತಂತ್ರಿ‌, ಗೋಪಾಲ್ ಜೋಯಿಸ್,  ಸುಬ್ರಹ್ಮಣ್ಯ ಭಟ್ , ಪ್ರದೀಪ್ ರಾವ್​, ​ ಅನಂತ ಸಾಮಗ​,  ಪೆರಂಪಳ್ಳಿ ​ಉಪಸ್ಥಿತರಿದ್ದರು 

 
 
 
 
 
 
 
 
 
 
 

Leave a Reply