Janardhan Kodavoor/ Team KaravaliXpress
26 C
Udupi
Monday, May 17, 2021

ಅಧ್ಯಾತ್ಮ ವಿದ್ಯಾರ್ಜನೆಯಿಂದ ಮಾತ್ರ ಶಾಶ್ವತ ಆನಂದ ಸಾಧ್ಯ- ಪುತ್ತಿಗೆ ಶ್ರೀ 

ಕಳೆದ ಒಂದು ವರ್ಷದಿಂದ ಪುತ್ತಿಗೆ ಶ್ರೀಪಾದರ ಆಶಯದಂತೆ ಶ್ರೀ ಪುತ್ತಿಗೆ ಮಠದ ಅಮೆರಿಕದ ನ್ಯೂಜೆರ್ಸಿ ಶಾಖಾಮಠದಿಂದ ಆಯೋಜನೆ ಗೊಂಡ ವೆಬಿನಾರ್ ಜ್ಞಾನಸತ್ರ “ಜಿಜ್ಞಾಸ ಯಜ್ಞ” ಮಂಗಳ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಆಶೀರ್ವಚನ ನೀಡಿದ ಪುತ್ತಿಗೆ ಶ್ರೀಪಾದರು ಗೀತಾಚಾರ್ಯ ಕೃಷ್ಣ ಹೇಳಿದಂತೆ ಅಧ್ಯಾತ್ಮ ವಿದ್ಯಾ ವಿದ್ಯಾನಾಮ್- ಎಂಬುದು ಎಲ್ಲರ ಸಾಧನೆಯ ಮಂತ್ರವಾಗಬೇಕು, ಇನ್ನಿತರ ವಿದ್ಯೆಗಳೆಲ್ಲಾ ತಾತ್ಕಾಲಿಕ ವಾಗಿ ಉಪಯುಕ್ತಗಳು ಹೊರತು ಶಾಶ್ವತವಲ್ಲ ಆದರೆ ಅಧ್ಯಾತ್ಮ ವಿದ್ಯೆಯು ಪರಮಾತ್ಮನ ಅನುಗ್ರಹಕ್ಕೆ ಕಾರಣವಾಗುವುದರ ಮೂಲಕ ಶಾಶ್ವತವಾದ ಮೋಕ್ಷವೆಂಬ ಮಹಾಫಲವನ್ನೇ ನೀಡಬಲ್ಲದು ಎಂದರು. 

ನಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರು ಹೊಂದಿದ್ದ ಜ್ಞಾನಪ್ರಸಾರದ ದೀಕ್ಷೆ ಇವತ್ತು ನಮಗೆ ಜಗತ್ತಿನಾದ್ಯಂತ ತತ್ವಜ್ಞಾನದ ಪ್ರಸಾರಕ್ಕೆ ಪ್ರೇರಣೆ ಆಗಿದೆ ಎಂದು ತಿಳಿಸಿದರು .ಕೊರೋನಾದಂತಹ ಮಹಾಮಾರಿಯು ಇವತ್ತು ಎಲ್ಲ ಸಜ್ಜನರಿಗೆ ಮಾನಸಿಕ ಅಶಾಂತಿಗೆ ಕಾರಣವಾಗಿದ್ದರೆ ಈ ಸಂದರ್ಭವನ್ನು ಜ್ಞಾನ ಸಂಪಾದನೆಯ ಮೂಲಕ ಶಾಂತಿಯೆಡೆಗೆ ಸಾಗುವಂತೆ ಈ ಜ್ಞಾನಸತ್ರ ಮಾಡಿದೆ ಎಂದು ತಿಳಿಸಿದರು.

ಈ ಜ್ಞಾನಸತ್ರ ಸತ್ರದಲ್ಲಿ ಪುತ್ತಿಗೆ ಶ್ರೀಪಾದರು ರಾಮಾಯಣ ಚಿಂತನೆಯನ್ನು ನಡೆಸಿದ್ದರು .ಅದೇ ರೀತಿ ಮಧ್ವ ವಿಜಯ ಮಹಾಭಾರತ ತಾತ್ಪರ್ಯ ನಿರ್ಣಯ, ಹರಿಕಥಾಮೃತಸಾರ, ಬ್ರಹ್ಮಸೂತ್ರಭಾಷ್ಯ,ರಾಘವೇಂದ್ರ ಸ್ತೋತ್ರ, ತೀರ್ಥಪ್ರಬಂಧ, ದಶಾವತಾರ ಸ್ತುತಿ, ಗೀತಾ ವಿವೃತ್ತಿ,ಹೀಗೆ ಅನೇಕ ವಿಚಾರಗಳ ಕುರಿತು ಪಾಠ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬಂದದ್ದು ವಿಶೇಷವಾಗಿತ್ತು. ಈ ಕುರಿತಾಗಿ ಪ್ರಾಧ್ಯಾಪಕರು ಮತ್ತು ನೂರಾರು ಶೋತೃಗಳು ಅಭಿಪ್ರಾಯಗಳನ್ನು ತಿಳಿಸಿದರು. ಪುತ್ತಿಗ ಶ್ರೀಪಾದರ ಸಾಗರೋತ್ತರ ಕಾರ್ಯದರ್ಶಿ ಎಂ. ಪ್ರಸನ್ನಾಚಾರ್ಯರು ಪ್ರಸ್ತಾವನೆಗೈದರು.ನ್ಯೂಜೆರ್ಸಿ ಶಾಖೆಯ ವ್ಯವಸ್ಥಾಪಕ ಯೋಗಿಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿದರು.

 

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಸೋದೆ, ಶಿರೂರು ಉಭಯ ಶ್ರೀಗಳಿಂದ ಪಲಿಮಾರು ಮೂಲ ಮಠಕ್ಕೆ ಭೇಟಿ 

ಶೀರೂರು ಮಠಕ್ಕೆ ಪಟ್ಟಾಭಿಷಿಕ್ತರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸೋದೆ ಶ್ರೀವಿಶ್ವ ವಲ್ಲಭ ತೀರ್ಥರ ಜೊತೆಯಾಗಿ ಪಲಿಮಾರು ಮೂಲಮಠಕ್ಕೆ ಭೇಟಿ ನೀಡಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ...

ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿದೆ ಪ್ರಗತಿಕಾರ್ಯ

ಉಡುಪಿ: ಜಿಲ್ಲೆಯ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಮೊದಲ ಹಂತದಲ್ಲಿ ಶ್ರೀ ಮಹಾಗಣಪತಿಯ ಗುಡಿ ತೀರ್ಥಮಂಟಪಗಳನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ .‌ ಸೀಮಿತ ಅವಧಿಯೊಳಗೆ ಕಾರ್ಯಗಳನ್ನು...

​ಕಾಪು ಸಮುದ್ರ ಮಧ್ಯೆ ಸಿಲುಕಿಕೊಂಡಿರುವ 9 ಕಾರ್ಮಿಕರ ರಕ್ಷಣೆಗೆ ಪ್ರಧಾನಿ, ರಕ್ಷಣಾ ಸಚಿವರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮನವಿ

ಭಾರತ ಸರಕಾರದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಗೌರವಾನ್ವಿತ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರೇ, ಉಡುಪಿ ಜಿಲ್ಲೆಯ ಕಾಪು ಸಮುದ್ರ ತೀರದಿಂದ ಸಮುದ್ರದ ಮಧ್ಯದಲ್ಲಿ ಈ ಬಡಪಾಯಿ ಕಾರ್ಮಿಕರು ಸಿಕ್ಕಿಬಿದ್ದಿರುತ್ತಾರೆ, ಸಮುದ್ರ...

ಹೋಪ್ ಇಂಡಿಯಾ ಫೌಂಡೇಶನ್​ ವತಿಯಿಂದ ​ಕೊರೋನಾ ಮುಕ್ತ ಉಡುಪಿ ನಿರ್ಮಾಣ​ ಪಣ ​  ​​

ಉಡುಪಿ ಬೋರ್ಡ್ ಹೈಸ್ಕೂ​ನಲ್ಲಿ  ಆಶ್ರಯ ಪಡೆದಿರುವ ಭಿಕ್ಷುಕರು, ನಿರ್ಗತಿಕರು ಹಾಗೂ ಹೊರ ಜಿಲ್ಲೆಗಳಿಂದ ಬಂದಿರುವ ವಲಸೆ ಕಾರ್ಮಿಕರಲ್ಲಿ ಹೆಚ್ಚಿನವರಿಗೆ ಕೊರೋನಾ ಸೋಂಕು ತಗಲಿರುವ ಬಗ್ಗೆ ಸಂಶಯವಿದ್ದು ಅವರಿಂದ ಉಳಿದ ಸಾರ್ವಜನಿಕರಿಗೆ ಹರಡುವುದನ್ನು ತಪ್ಪಿಸಿ ಕೊರೋನಾ...
error: Content is protected !!