Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ಪ್ರಪಂಚದಾದ್ಯಂತ 108 ಕೃಷ್ಣನ ದೇವಾಲಯಗಳನ್ನು ನಿರ್ಮಿಸಬೇಕೆಂಬ ಇಚ್ಛೆ~ ಶ್ರೀ ಶ್ರೀ ಸುಗುಣೇದ್ರ ತೀರ್ಥ ಶ್ರೀಪಾದರು

ಅಮೆರಿಕದ ಸ್ಯಾನ್ ಹೋಸೆ ನಗರವು ಇಂದು ವಿಶೇಷ,  ದೈವಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಸಂಸ್ಥಾನವಾದ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ, ಭಾವಿ ಪರ್ಯಾಯ ಶ್ರೀ ಪುತ್ತಿಗೆ  ಮಠಾಧೀಶರಾದ ಶ್ರೀ ಶ್ರೀ ಸುಗುಣೇದ್ರ ತೀರ್ಥ ಶ್ರೀಪಾದಂಗಳವರ  ಚಾತುರ್ಮಾಸ್ಯದ ವ್ರತ ಸಂಕಲ್ಪಕ್ಕೇ ಸಾಕ್ಷಿಯಾಯಿತು.

ಇದರ ಅಂಗವಾಗಿ  ಆಸ್ತಿಕ ಭಕ್ತರರೆಲ್ಲರೂ ತಾಳ ತಾಂಬೂರಿಯೊಡನೆ, ಶ್ರಿಗಳೊಂದಿಗೆ ಹೆಜ್ಜೆ ಹಾಕುತ್ತಾ ಅಲಮೇಡಾ ಮುಖ್ಯ ರಸ್ತೆಯಲ್ಲಿ  ಶ್ರೀ ವಿಠಲನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಶ್ರೀ ಕೃಷ್ಣ ಬೃಂದಾವನ ಕ್ಷೇತ್ರಕ್ಕೆ ಬಂದರು.
ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ನಿಗದಿತ ಸ್ಥಳಗಳಲ್ಲಿ ಮೆರವಣಿಗೆಯನ್ನು ಮಾಡುತ್ತ ಶ್ರೀ ಕ್ಷೇತ್ರವನ್ನು ತಲುಪಿದಾಗ,  ಅವರನ್ನು ಪೂರ್ಣ ಕುಂಭದಿಂದ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.

ದಾರಿ ಉದ್ದಕ್ಕೂ ಹೆಣ್ಣು ಮಕ್ಕಳ ಕೋಲಾಟ,  ದಾಸರ ಪೋಷಕಗಳನ್ನು ಧರಿಸಿದ್ದ ಭಕ್ತಾದಿಗಳಿಂದ ,  ಭಾರತವನ್ನೇ ಇಲ್ಲಿ ತಂದಂತಾಯಿತು.  ದೀಪ ಪ್ರಜ್ವಾಲನೆಯಿಂದ  ಕಾರ್ಯಕ್ರಮ ಪ್ರಾರಂಭವಾಗಿ , ದಾಸರಪದ ಮತ್ತು ವಿಶೇಷ ಅತಿಥಿಗಳಾಗಿ ಆಗಮಿಸಿ ದಂತಹ ಶ್ರೀಕೇಶವರಾವ್ ತಾಡಪತ್ರಿ ಹಾಗೂ ಶ್ರೀ ವಿಜಯ ಪುಲ್ಲೂರ್ ಅವರು ಚಾತುರ್ಮಾಸ್ಯದ ಬಗ್ಗೆ ಕೆಲವು ಮಾತುಗಳನ್ನಾಡಿದರು.

ನಂತರ ಅನುಗ್ರಹ ಸಂದೇಶವನ್ನು ನೀಡಿದಂತಹ ಶ್ರಿ ಸುಗುಣೇಂದ್ರ ತೀರ್ಥರು , ಚಾತುರ್ಮಾಸ್ಯದ ಮಹತ್ವವನ್ನು ಜನರಿಗೆ ತಿಳಿಹೇಳಿ , ತಾವು ಸ್ಯಾನ್ ಹುಸೇ ನಗರಕ್ಕೆ ಬಂದಾಗೆಲ್ಲ ತವರು ಮನೆಗೆ ಬಂದಂತೆ ಆಗುತ್ತದೆ ಎಂಬ ಅನುಭವವನ್ನು ಹಂಚಿಕೊಂಡರು.  ಮತ್ತು ಮುಂದಿನ 45 ದಿನಗಳ ಕಾಲ ಕಾರ್ಯಕ್ರಮದ ಯೋಜನೆಗಳ ರೂಪು ರೇಷೆಗಳನ್ನು ತಿಳಿಸಿದರು ಮತ್ತು ಪ್ರಪಂಚದಾದ್ಯಂತ 108 ಕೃಷ್ಣನ ದೇವಾಲಯಗಳನ್ನು ನಿರ್ಮಿಸಬೇಕೆಂಬ ಇಚ್ಛೆಯನ್ನು ಕೂಡ ವ್ಯಕ್ತಪಡಿಸಿದರು. ಇಡೀ  ವಾತಾವರಣ ದೈವಿಕವಾಗಿತ್ತು. ಕಾರ್ಯಕ್ರಮವು ಎಂದಿನಂತೆ ತೊಟ್ಟಿಲು ಪೂಜೆ ಇಂದ ಸಮಾಪ್ತಿಯಾಯಿತು.

ಭಕ್ತಾದಿಗಳೆಲ್ಲರೂ ಇಂದಿನ ಕಾರ್ಯಕ್ರಮದಲ್ಲಿ ಅವಿರ್ವಚನೀಯ ಆನಂದವನ್ನು ಅನುಭವಿಸಿ,  ಭಕ್ತಿ ಸಾಗರದಲ್ಲಿ ಮಿಂದೆದ್ದರು.  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ  ಸ್ಯಾನ್ ಹೋಸೆಯ ಸಾರ್ಜೆಂಟ್ ಆಂಥೋನಿ ಕಿಲ್ಮರ್, ಲೆಫ್ಟಿನೆಂಟ್ ಪೌಲ್ ಹಾಂಬ್ಲಿನ್ ಹಾಗೂ ಸಮುದಾಯದ ಸೇವಾ ಆಫೀಸರ್ ಆದ ಕನಕ ಗುರುಪ್ರಸಾತ್ ಅವರನ್ನು , ವಿಶೇಷವಾಗಿ , ಪುತ್ತಿಗೆ ಮಠಾಧೀಶರು ಸನ್ಮಾನಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!