ಸಂಸ್ಕೃತದ ಅಭ್ಯುದಯದಿಂದ ವಿಶ್ವದ ಅಭ್ಯುದಯ” ಪುತ್ತಿಗೆ ಶ್ರೀಪಾದರು.

ಈ ಜಗದ ಸೃಷ್ಟಿಯ ಮೂಲ ಓಂಕಾರ ಎಂದು ಶಾಸ್ತ್ರಿಗಳು ಸಾರುತ್ತಿವೆ. ಇಂಥಹ ಓಂಕಾರವು ಸಂಸ್ಕೃತದ ಮೂಲವಾಗಿದೆ. ವೇದ-ಪುರಾಣ-ಇತಿಹಾಸ-ಆಯುರ್ವೇದ-ಯೋಗ-ವಿಜ್ನಾನ ಮುಂತಾದ ಸಮಸ್ತವೂ ಸಂಸ್ಕೃತ ನಿಬದ್ಧವಾಗಿವೆ. ಇವುಗಳಿಂದಲೇ ಈ ದೇಶ ವಿಶ್ವಗುರು ವಾಗಿದೆ. ಆದ್ದರಿಂದ ಸಂಸ್ಕೃತದ ಸಂರಕ್ಷಣೆಯಿಂದ ವಿಶ್ವದ ಅಭ್ಯುದಯ ಸಾಧ್ಯ .
ಈ  ಹಿನ್ನೆಲೆಯಲ್ಲಿ ಸಂಸ್ಕೃತವು ಜನರ ಆಡುಭಾಷೆಯಾಗಲಿ ಎಂದು ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಕರೆ ನೀಡಿದರು. ಒರಿಸ್ಸಾದ ಲೋಕಭಾಷಾ ಪ್ರಚಾರ ಸಮಿತಿಯವರು ಇಂದು ಸಂಸ್ಕೃತೋತ್ಸವದ ಪ್ರಯುಕ್ತ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಂಸ್ಕೃತೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪೂಜ್ಯ ಶ್ರೀಪಾದರು ಸಂದೇಶವನ್ನು ನೀಡಿ
ರು. ಕೇಂದ್ರ ಸರ್ಕಾರದ ಮಾನ್ಯ ಮಂತ್ರಿಗಳಾದ ಶ್ರೀ ಪ್ರತಾಪಚಂದ್ರ ಷಡಂಗಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೇಶ-ವಿದೇಶಗಳ ಅನೇಕ ವಿದ್ವಾಂಸರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಕಂಚೀ ಕಾಮಕೋಟಿ ಸಂಸ್ಥಾನದ ಪರಮಪೂಜ್ಯ ಶ್ರೀವಿಜಯೀಂದ್ರಸರಸ್ವತೀ ಶ್ರೀಪಾದರು. ಸಮಾರೋಪ ಭಾಷಣವನ್ನು ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಪ್ರೋ.ಸಚ್ಚಿದಾನಂದ ದೀಕ್ಷಿತರು ವಹಿಸಿದ್ದರು.
 
 
 
 
 
 
 
 
 
 
 

Leave a Reply