ದೇವ ವಿಗ್ರಹದಲ್ಲಿ ಪ್ರಾಣಪ್ರತಿಷ್ಠೆ ನಡೆಸಿದ ದೇಶದ ಮೊದಲ ಮಹಿಳಾ ತಂತ್ರಿ

ದೇವ ವಿಗ್ರಹದಲ್ಲಿ ಪ್ರಾಣಪ್ರತಿಷ್ಠೆ ನಡೆಸಿದ ದೇಶದ
ಮೊದಲ ಮಹಿಳಾ ತಂತ್ರಿಗೆ ವೇದಾಂತದಲ್ಲಿ ರೇಂಕ್ !!

ಹೌದು…
ಇದೊಂದು ಅಚ್ಚರಿಯ ಗೌರವದ ಸುದ್ದಿ..!
ಮಹಿಳೆಯರಿನ್ನೂ ಕಾಲೂರದ ತಂತ್ರ ವಿದ್ಯಾ ಕ್ಷೇತ್ರಕ್ಕೆ ಕಾಲಿಟ್ಟ ಮೊದಲ ವನಿತೆಯೊಬ್ಬಳ ದಿಟ್ಟ ಸಾಧನೆಯ ಕತೆ.
ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಭದ್ರಕಾಳಿ ದೇವಾಲಯದಲ್ಲಿ ವಿಗ್ರಹದ ಪ್ರಾಣಪ್ರತಿಷ್ಠೆ ನಡೆಸಿ ಮೊದಲ ಮಹಿಳಾ ತಂತ್ರಿ ಎಂದು ಕರೆಸಿಕೊಂಡಾಕೆ ಈಗ ಅದೇ ತಂತ್ರವಿದ್ಯೆಯಲ್ಲಿ ಯೂನಿವರ್ಸಿಟಿ ರೇಂಕ್ ವಿಜೇತಳಾಗಿದ್ದಾಳೆ !!

ಕೇರಳದ ಕಣ್ಣೂರು ಜಿಲ್ಲೆಯ ಆಯಿಕ್ಕೋಡ್ ಅಕ್ಕೀಯತ್ ಶಿವಾಲಯದ ತಂತ್ರಿ ತರಣನಲ್ಲೂರ್ ಪದ್ಮನಾಭನ್ ಅಪ್ಪು ನಂಬೂದಿರಿ ಮತ್ತು ಅರ್ಚನಾ ರ ಪುತ್ರಿಯಾದ ಈಕೆಯ ಹೆಸರು ಜ್ಯೋತ್ಸ್ನಾ ಪದ್ಮನಾಭನ್. ಕೇರಳದ ಕಲ್ಲಿಕೋಟೆ ಮಹಾತ್ಮಗಾಂಧಿ ಯೂನಿವರ್ಸಿಟಿ ನಡೆಸಿದ ಸಂಸ್ಕೃತ ವೇದಾಂತದಲ್ಲಿ ಈಕೆ ಈ ವರ್ಷದ ರೇಂಕ್ ಮುಡಿದು ಸಾಧನೆ ಮೆರೆದಿದ್ದಾರೆ.

ತಂತ್ರಾಗಮ ಕ್ಷೇತ್ರಕ್ಕೆ ಮಹಿಳೆಯರು ಕಾಲೂರುವುದು ಅತ್ಯಪೂರ್ವ ಬೆಳವಣಿಗೆ. ವೇದಾಂತದಲ್ಲಿ ಉನ್ನತ ಶಿಕ್ಷಣಗಳಿಸಿ ಇದೇ ರಂಗದಲ್ಲಿ ಸಂಶೋಧನೆ ನಡೆಸಬೇಕೆಂದು ಆಕೆಯ ಗುರಿ. ದೇಶದಲ್ಲೇ ಒಬ್ಬಾಕೆ ವನಿತೆ ವಿಗ್ರಹ ಪ್ರಾಣಪ್ರತಿಷ್ಠೆ ಯ ತಂತ್ರಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವುದು ಇದೇ ಮೊದಲು.
-ಎಂ. ನಾ. ಚಂಬಲ್ತಿಮಾರ್

 
 
 
 
 
 
 
 
 
 
 

Leave a Reply