Janardhan Kodavoor/ Team KaravaliXpress
27.6 C
Udupi
Monday, December 5, 2022
Sathyanatha Stores Brahmavara

ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿದೆ ಪ್ರಗತಿಕಾರ್ಯ

ಉಡುಪಿ: ಜಿಲ್ಲೆಯ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಮೊದಲ ಹಂತದಲ್ಲಿ ಶ್ರೀ ಮಹಾಗಣಪತಿಯ ಗುಡಿ ತೀರ್ಥಮಂಟಪಗಳನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ .‌

ಸೀಮಿತ ಅವಧಿಯೊಳಗೆ ಕಾರ್ಯಗಳನ್ನು ಮುಗಿಸಬೇಕಾದ ಕಾರಣ ಲಾಕ್ ಡೌನ್ ಅವಧಿಯಲ್ಲೂ ಐದು ಜನ ಶಿಲ್ಪಿಗಳು ದಿನಪೂರ್ತಿ ಕಾಮಗಾರಿ ನಡೆಸುತ್ತಿದ್ದಾರೆ.ಬೃಹತ್ ಗಾತ್ರದ ಮತ್ತು ಅತಿ ಭಾರದ ಶಿಲಾ ರಚನೆಗಳನ್ನು ಕ್ರೇನ್ ಬಳಸಿ ಅಳವಡಿಸಲಾಗುತ್ತಿದೆ. ಗಣಪತಿ ಗುಡಿ ಮತ್ತು ತೀರ್ಥಮಂಟಪಗಳ ಕಾಮಗಾರಿಗೆ ಸುಮಾರು 40 ಲಕ್ಷರೂ ವೆಚ್ಚವನ್ನು ಅಂದಾಜಿಸಲಾಗಿದೆ.

ಮಳೆಗಾಲ ಮುಗಿದ ಬಳಿಕ ಮಹಾಲಿಂಗೇಶ್ವರ ದೇವರ ಗರ್ಭಗುಡಿಗೆ ತಾಮ್ರದ ಮಾಡು(40 ಲಕ್ಷ) ಮುಖಂಮಟಪ ನವೀಕರಣ (20 ಲಕ್ಷರೂ )ಸುಸಜ್ಜಿತ ಭೋಜನ ಶಾಲೆ, ಪಾಕ ಶಾಲೆ, ಸಭಾಭವನ , ಅರ್ಚಕರು ಮತ್ತು ಸಹಾಯಕರಿಗೆ ಮನೆ , ಗೋಶಾಲೆ ಹಾಗೂ ನೂತನ ರಥ ನಿರ್ಮಾಣಕಾರ್ಯಗಳನ್ನು ಅಂದಾಜು 2.5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಉಡುಪಿಯ ಹಿರಿಯ ನ್ಯಾಯವಾದಿ ಹಾಗೂ ಪೆರಂಪಳ್ಳಿ ನೆಕ್ಕಾರು ಮನೆತನದ ಹಿರಿಯ ಸದಸ್ಯ ಪಿ ಎನ್ ಗೋಪಾಲಕೃಷ್ಣ ರಾವ್ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಅವರ ಪುತ್ರ ನ್ಯಾಯವಾದಿ ಪಿ ಎನ್ ಪ್ರಸನ್ನಕುಮಾರ್ ರಾವ್ ಮಾರ್ಗದರ್ಶನಗೈಯುತ್ತಿದ್ದಾರೆ.

ಗುಂಡಿಬೈಲು ಸುಬ್ರಹ್ಮಣ್ಯ ಭಟ್ ವಾಸ್ತು ನಿರ್ದೇಶನ ಮತ್ತು ಹೆರ್ಗ ಜಯರಾಮ ತಂತ್ರಿಗ ದೇವಳದ ತಂತ್ರಿಗಳಾಗಿ ಈ ನವೀಕರಣಕಾರ್ಯಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.‌ ಕೊಡಂಗಳ ಪ್ರದ್ಯುಮ್ನ ಭಟ್ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಊರ ಭಕ್ತಾದಿಗಳು ಆರ್ಥಿಕ ನೆರವು ನೀಡಿ ಸಹಕರಿಸುವಂತೆಯೂ ಜೀರ್ಣೋದ್ಧಾರ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿ ಮನವಿ ಮಾಡಿಕೊಂಡಿದೆ.ಭಕ್ತಿಪೂರ್ವಕವಾಗಿ ನೀಡುವ ಯಾವುದೇ ದೇಣಿಗೆಗಳನ್ನು ಕೃತಜ್ಞತಾಪೂರ್ವಕ ಸ್ವೀಕರಿಸಲಾಗುವುದು.ದೇಣಿಗೆಗಳನ್ನು ದೇವಳದ ಬ್ಯಾಂಕ್ ಖಾತೆಗೂ ಸಲ್ಲಿಸಬಹುದು. ಸೂಕ್ತ ರಶೀದಿಗಳು ಅಂಚೆ ಮೂಲಕ ಕಳಿಸಲಾಗುವುದು ಎಂದು ದೇವಳದ ಪ್ರಕಟಣೆ ತಿಳಿಸಿದೆ .‌

ಬ್ಯಾಂಕ್ ಖಾತೆ ವಿವರ :

Sri Mahalingeshwara Temple
Perampalli
SB account no : 0182500101368301
Karnataka Bank
Ambagilu Branch
IFSC : KARB0000018
UDUPI

ಮಾಹಿತಿಗಾಗಿ ಸಂಪರ್ಕ ಸಂಖ್ಯೆ :
9845180027: ಪಿ ಎನ್ ಪ್ರಸನ್ನಕುಮಾರ್ ರಾವ್

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!