ನೀಲಾವರ ಗೋಶಾಲೆಯಲ್ಲಿ ವೈಭವದ ಮೊಸರು ಕುಡಿಕೆ ಉತ್ಸವ

 

ನೀಲಾವರ ಗೋಶಾಲೆಯಲ್ಲಿ ಇದೇ ಪ್ರಥಮವೆಂಬಂತೆ ಶ್ರೀ ಕೃಷ್ಣ ಜಯಂತೀ ಮತ್ತು ಮೊಸರು ಕುಡಿಕೆ ಉತ್ಸವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ‌ ದಿವ್ಯ ಉಪಸ್ಥಿತಿಯಲ್ಲಿ ಸರಳ ಆದರೆ ವೈಭವದಿಂದ ನೆರವೇರಿತು. ಶುಕ್ರವಾರ ಮಧ್ಯಾಹ್ನ ನಡೆದ ಕೃಷ್ಣಲೀಲೋತ್ಸವವನ್ನು ಶ್ರೀಗಳ ವಿದ್ಯಾರ್ಥಿಗಳು ಮತ್ತು ಸಿಬಂದಿ ವರ್ಗ ಅತ್ಯಂತ ವಿಶಿಷ್ಟವಾಗಿ ಸಂಯೋಜಿಸಿ ಹತ್ತಾರು ವಿದ್ಯಾರ್ಥಿಗಳು ತಾವೇ ಸ್ವಯಂ ಗೋಪಾಲಕರಾಗಿ ಗೋಶಾಲೆಯ ಆವರಣದಲ್ಲಿ ನಡೆದ ಮೆರವಣಿಗೆಯಲ್ಲಿ ಭಾಹವಹಿಸಿ ಅಲ್ಲಲ್ಲಿ ತೂಗು ಹಾಕಿದ್ದ ಬಣ್ಣದ ಓಕುಳಿ, ಮೊಸರು, ಚಕ್ಕುಲಿ ಉಂಡೆ ಬೆಣ್ಣೆ, ಇತ್ಯಾದಿಗಳನ್ನು ತುಂಬಿದ್ದ ಅಲಂಕೃತ ಮಡಕೆಗಳನ್ನು ಒಡೆದು ಸಂಭ್ರಮಿಸಿದರು.

ಮಣ್ಣಿನಿಂದ ತಯಾರಿಸಿದ ಕೃಷ್ಣನ ವಿಗ್ರಹಕ್ಕೆ ಶ್ರೀಗಳು ಮಂಗಳಾರತಿ ಬೆಳಗಿದ ಬಳಿಕ ಬೆಳ್ಳಿ ಪಲ್ಲಕಿಯಲ್ಲಿಟ್ಟು, ಆ ಪಲ್ಲಕ್ಕಿಯನ್ನು ಟ್ರ್ಯಾಕ್ಟರ್ ನಲ್ಲಿಟ್ಟು ವಿವಿಧ ವೆರಷ ಚೆಂಡೆವಾದನ ಸಹಿತ ಮೆರವಣಿಗೆಯು ಗೋಶಾಲೆಯ ಆವರಣದಲ್ಲಿ ನಡೆಯಿತು. ಉತ್ಸವದ ಬಳಿಕ ದೇವರಿಗೆ ವೇಣುವಾದನ ಸೇವೆ ನಡೆಯಿತು. ನಂತರ ಮೃಣ್ಮಯ ವಿಗ್ರಹವನ್ನು ಶ್ರೀಗಳು ಪುಷ್ಕರಿಣಿಯಲ್ಲಿ ವಿಸರ್ಜಿಸುವುದರೊಂದಿಗೆ ಸಂಪನ್ನಗೊಂಡಿತು.

Leave a Reply