Janardhan Kodavoor/ Team KaravaliXpress
29.6 C
Udupi
Saturday, July 2, 2022
Sathyanatha Stores Brahmavara

ಕುಂಜಾರುಗಿರಿಯ ಭಾರ್ಗವರಾಮನ ಸನ್ನಿಧಿಯಲ್ಲಿ ಪರಶುರಾಮ ಜಯಂತೀ ಉತ್ಸವ

ಉಡುಪಿ: ಜಿಲ್ಲೆಯ ಅತ್ಯಂತ ಪ್ರಾಚೀನ ತಾಣವಾಗಿರುವ ಕುಂಜಾರುಗಿರಿ ಶ್ರೀ ಪರಶುರಾಮ ದೇವಸ್ಥಾನದಲ್ಲಿ ಪರಶುರಾಮ ಜಯಂತೀ ಉತ್ಸವವು ಅಕ್ಷಯ ತೃತೀಯಾ ಪರ್ವದಿನ ಶುಕ್ರವಾರ ಸರಳವಾಗಿ ನೆರವೇರಿತು.

 ಎಲ್ಲಾ ಧಾರ್ಮಿಕ ವಿಧಿಗಳನ್ನು ಲೋಕದಲ್ಲಿ ಕೊರೊನಾ ಮುಕ್ತವಾಗಿ ಕ್ಷೇಮಸಿದ್ಧಿಸುವಂತೆ ಪ್ರಾರ್ಥಿಸಿ ನೆರವೇರಿಸಲಾಯಿತು.ಶ್ರೀ ದೇವರಿಗೆ ವಿಶೇಷ ಕಲಶಾಭಿಷೇಕ ಸಹಿತ ಪ್ರಸನ್ನ ಪೂಜೆ ಹಾಗೂ ಸಂಜೆ ರಂಗಪೂಜಾದಿಗಳು ಅರ್ಚಕ ಗೋಪಾಲಕೃಷ್ಣ ಭಟ್ಟರ ನೇತೃತ್ವದಲ್ಲಿ ನಡೆಯಿತು. 

ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.ಕೊರೊನಾ ನಿರ್ಬಂಧದ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶ ಇರಲಿಲ್ಲ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!