ಪಣಿಯಾಡಿ ಶ್ರೀಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಚೇರಿ ಕಾರ್ಯಾರಂಭ

ಉಡುಪಿ:ಶ್ರೀ ಅನಂತಾಸನ ಶ್ರೀಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನ ಪಣಿಯಾಡಿಯ ಜೀರ್ಣೋದ್ಧಾರ ಸಮಿತಿಯ ಕಚೇರಿ ಉದ್ಘಾಟನೆ ಸಮಾರಂಭವು ಭಾನುವಾರದಂದು ನಡೆಯಿತು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಶ್ರೀ ಸುಗುಣೇ೦ದ್ರ ತೀರ್ಥ ಸ್ವಾಮೀಜಿಯವರು ದೀಪವನ್ನು ಬೆಳಗಿಸಿ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿಮಾಣಗೊಳ್ಳಲಿರುವ ನೂತನ ದೇವಸ್ಥಾನದ ನೀಲಿ ನಕಾಶೆಯನ್ನು ಅನಾವರಣಗೊಳಿಸಿದರು.

ಉಡುಪಿಯ ವಿಜಯ ಮೆಟಲ್ ಸಂಸ್ಥೆಯ ವತಿಯಿಂದ ನೀಡಲಾದ ಜೀರ್ಣೋದ್ಧಾರ ನಿಧಿಯ ಹು೦ಡಿಗೆ ಸ್ವಾಮಿಜಿಯವರು ಕಾಣಿಕೆ ಹಾಕುವುದರ ಮುಖಾ೦ತರ ಹುಂಡಿಯನ್ನು ಸ್ಥಾಪಿಸಲಾಯಿತು. ಸಾಣೂರು ಶ್ರೀರಾಮಭಟ್, ಬೆಳ್ಳಿಪಾಡಿ ಹರಿಪ್ರಸಾದ್ ರೈ,ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯ, ಸಾಯಿ ಬಾಬ ಮಂದಿರದ ತೋಟದ ಮನೆ ದಿವಾಕರ ಶೆಟ್ಟಿ,ಕೊಲ್ಲೂರು ದೇವಳದ ಆಡಳಿತ ಮಂಡಳಿಯ ಸದಸ್ಯೆ ಸಂಧ್ಯಾರಮೇಶ್, ನಾಗರಾಜ ಆಚಾರ್ಯ, ಕಾರ್ಯಾಧ್ಯಕ್ಷ ಎಸ್ ನಾರಾಯಣ ಮಡಿ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಪ್ರಧಾನಕಾರ್ಯದರ್ಶಿ ಬಿ.ವಿಜಯರಾಘವ ರಾವ್ ರವರು ಸ್ವಾಗತಿಸಿ, ಸಮಿತಿಯ ಕಾರ್ಯಾಧ್ಯಕ್ಷ ಮಲ್ಪೆ ವಿಶ್ವನಾಥ್ ಭಟ್ ರವರು ಪ್ರಸ್ತಾವಿಕವಾಗಿ ಮಾತನಾಡಿದರು.ರಾಜೇಶ್ ಭಟ್ ಪಣಿಯಾಡಿ ನಿರೂಪಿಸಿ, ಕೆ ರಾಘವೇಂದ್ರ ಭಟ್ ವ೦ದಿಸಿದರು.
ದೇವಸ್ಥಾನದ ಕಲ್ಲಿನ ಕೆತ್ತನೆಯ ಕೆಲಸವನ್ನು ಶಿಲ್ಪಿ ರಾಜು ನಾಯಕ್ ನಡೆಸುತಿದ್ದಾರೆ. ಕಾಮಗಾರಿಯ ಉಸ್ತುವಾರಿಯನ್ನು ಉಡುಪಿಯ ನಿಧಿ ಕನ್ ಸ್ಟ್ರಕಷನ್ ಮಾಲೀಕ ಸ೦ತೋಷ್ ಪಿ ಶೆಟ್ಟಿ ತೆಂಕರಗುತ್ತು ವಹಿಸಿಕೊಂಡಿರುತ್ತಾರೆ.

 
 
 
 
 
 
 
 
 
 
 

Leave a Reply