ಪಣಿಯಾಡಿಯ ಅನಂತನ ಸನ್ನಿಧಿಯಲ್ಲಿ ಅಚ್ಚರಿ

ಉಡುಪಿ: ನಗರದಿಂದ 3 ಕಿಲೋ ಮೀಟರ್ ದೂರದಲ್ಲಿರುವ ಪಣಿಯಾಡಿಯಲ್ಲಿ 1000 ವರುಷಗಳ ಹಿಂದಿನ ಇತಿಹಾಸ ಉಳ್ಳ ಒಂದು ಪುರಾತನ ದೇವಸ್ಥಾನ – ಪಣಿಯಾಡಿ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅಚ್ಚರಿಯ ಘಟನೆ ನಡೆದಿದೆ.

ಪುತ್ತಿಗೆ ಮಠ ಹಾಗೂ ಪಣಿಯಾಡಿಯ ಅನಂತ ಭಕ್ತವೃಂದದ ಉಸ್ತುವಾರಿಯಲ್ಲಿ ದೇವಳದ ಜೀರ್ಣೋದ್ಧಾರ ಕೆಲಸ ಪ್ರಗತಿಯಲ್ಲಿ ಸಾಗುತ್ತಿದ್ದು ಮೇ ತಿಂಗಳಲ್ಲಿ ಬೃಹ್ಮಕಲಶದ ಆಶಯವಿಟ್ಟು ಜೀರ್ಣೋದ್ದಾರದ ಕೈಂಕರ್ಯ ನಡೆಯುತ್ತಿದೆ. ಈ ವೇಳೆ ಮಾ. 23 ರಂದು ಒಂದು ಕೌತುಕ ಹಾಗೂ ವಿಸ್ಮಯಕಾರಿ ಘಟನೆ ಬೆಳಕಿಗೆ ಬಂದಿದೆ. ದೇವಳದ ಪೌಳಿ ನಿರ್ಮಾಣಕ್ಕಾಗಿ ಮಣ್ಣು ಅಗೆಯುತ್ತಿರುವಾಗ ದೇವಳದ ಉತ್ತರ ಭಾಗದಲ್ಲಿ ಸುಮಾರು ನೆಲ ಮಟ್ಟದಿಂದ 8 ಅಡಿ ಕೆಳಗೆ ಒಂದು ಅರ್ಧ ಗೋಳಾಕಾರದ ಗುಹೆಯೊಂದು ಕಂಡು ಬಂದಿದೆ.

ಈ ಗುಹೆಯ ಮೇಲ್ಮೈ ಯಲ್ಲಿ ಕಲ್ಲಿನ ಮುಚ್ಚಳವಿದ್ದಂತಿತ್ತು, ಗುಹೆಯ ಒಳಗೆ ನುಣುಪಾಗಿದ್ದು ಅದರಲ್ಲಿ 2-3 ಕಿಂಡಿಗಳಿರುವಂತೆ ನಿರ್ಮಿತವಾಗಿದೆ.ಆದರೆ ನೆಲ ಅಗೆಯುವ ಸಂದಭ೯ದಲ್ಲಿ ಅದರ ಅರಿವಿಲ್ಲದೆ ಒಂದು ಭಾಗ ಬಿನ್ನಗೊಂಡಿದೆ. ಇದರ ವಿಶೇಷತೆ ಯ ಬಗ್ಗೆ ಇನ್ನೂ ಏನೂ ವಿಷಯಗಳು ತಿಳಿದಿಲ್ಲ. ಹಿಂದೆ ಋಷಿ ಮುನಿಗಳು ತಪಸ್ಸು ಗೈಯುವ ಸ್ಥಳವಿದಾಗಿರಬಹುದು ಈ ಸ್ಥಳದೊಡೆಯ ಪದುಮನಾಭ ವಿವಾಹ ಮತ್ತುವಿದ್ಯೆಗೆ ಅಧಿದೇವತೆಯಾಗಿದ್ದು ಶೀಘ್ರ ಫಲದಾಯಕ ಎಂಬ ನಂಬಿಕೆಯಿದೆ . ಇನ್ನೊಂದು ವಿಶೇಷತೆ ಏನೆಂದರೆ ಹೀಗೆ ಆದಿಶೇಷನ ಮೇಲೆ ಕುಳಿತಿರುವ ಭಂಗಿಯಲ್ಲಿರುವ ಈ ಅನಂತ ಪದ್ಮನಾಭನ ಮೂರ್ತಿ ಬಹಳ ವಿರಳ.

 

 

 

 
 
 
 
 
 
 
 
 
 
 

Leave a Reply