Janardhan Kodavoor/ Team KaravaliXpress
31 C
Udupi
Friday, February 26, 2021

ನೇಪಾಳದ ಪಶುಪತಿನಾಥೇಶ್ವರನಿಗೆ ಭ್ರಹ್ಮಕಲಶ, ಕರಾವಳಿ ಜಿಲ್ಲೆಯ ವಿದ್ವಾನ್ ಪಂಜ ಭಾಸ್ಕರ್ ಭಟ್ ತಂಡಕ್ಕೆ ಒಲಿದ ಅವಕಾಶ.

ಭಾರತದಲ್ಲಿ ರಾಮಮಂದಿರಕ್ಕೆ ಎಷ್ಟು ಮಹತ್ವವಿದೆಯೋ ಅದೇ ರೀತಿ ಪಕ್ಕದ ನೇಪಾಳದಲ್ಲಿನ ಪಶುಪತಿ ನಾಥೇಶ್ವರ ದೇವಾಲಯವು ನೇಪಾಲಿಗರಿಗೆ ಅಷ್ಟೇ ಅತ್ಯಂತ ಮಹತ್ವ ಪಡೆದಿದೆ. ಅಂತಹ ಪುರಾತನ ದೇವಸ್ಥಾನದಲ್ಲಿ ಈಗ ಬಹಳ ವಿಜೃಂಭಣೆಯ ಬ್ರಹ್ಮಕಲಶೋತ್ಸವದ ಸಂಭ್ರಮ.ಆದರೆ ವಿಶೇಷ ಏನೆಂದರೆ ಪಶುಪತಿನಾಥನಿಗೆ ಕಲಶಾಭಿಷೇಕ ಪೂಜಾ ಕಾರ್ಯಗಳನ್ನು ನೆರವೇರಿಸುವ ಅವಕಾಶ ಈ ಬಾರಿ ಕರಾವಳಿ ಜಿಲ್ಲೆಯ ಬ್ರಾಹ್ಮಣ ವರ್ಗಕ್ಕೆ ಬಂದಿದ್ದು, ಇದು ಅಲ್ಲಿನ ಸರಕಾರ ಹಾಗು ದೇವಸ್ಥಾನದ ಆಡಳಿತ ವರ್ಗದ ತೀರ್ಮಾನವಾಗಿದೆ.

ನೇಪಾಳದ ರಾಜಧಾನಿ ಕಡ್ಮಂಡು ಪ್ರದೇಶದ ಹಿಮಾಲಯದ ತಪ್ಪಲಿನಲ್ಲಿ ಸ್ಥಿರವಾಗಿರುವ ವಿಶ್ವದ ಅತ್ಯಂತ ಹಳೆಯ ಹಾಗೂ ಮಹತ್ವದ ದೇವಾಲಯಗಳಲ್ಲಿಯೇ ಶ್ರೇಷ್ಠವೆನಿಸಿದ ಪಶುಪತಿನಾಥೇಶ್ವರ ದೇವಾಲಯವು ಕ್ರಿ.ಪೂ 400,ರಲ್ಲಿಯೇ ಅಸ್ತಿತ್ವದಲ್ಲಿ ಇತ್ತು ಎನ್ನಲಾಗಿದೆ.

ಸನ್ನಿಧಾನದಲ್ಲಿ ಐದು ಮುಖದ ಶಿವಲಿಂಗ ರೂಪದಲ್ಲಿರುವ ಶಿವನನ್ನು ನೇಪಾಲಿಗರು ಪಸುಪತಿನಾಥೇಶ್ವರ ಎಂದು ಕರೆಯುತ್ತಾರೆ, ಈ ದೇವಸ್ಥಾನವು ಭಾಗಮತಿ ನದಿಯ ತೀರದಲ್ಲಿದ್ದು, ಹಿಮಾಲಯದ ಕಣಿವೆಯಲ್ಲಿ ಹುಟ್ಟುವ ಭಾಗಮತಿ ನದಿಯು ದೇವ ನದಿಯಾದ ಗಂಗೆಯನ್ನು ಸೇರುವ ಮುಖಾಂತರ ಈ ನದಿಯನ್ನು ನೇಪಾಳಿಗರು ಗಂಗಾ ನದಿಗೆ ಸಮಾನವಾಗಿ ಆರಾಧಿಸುತ್ತಾರೆ.

ಇಲ್ಲಿನ ಇನ್ನೊಂದು ವಿಶೇಷ ಏನೆಂದರೆ ಶ್ರೀ ಆದಿ ಶಂಕರಾಚಾರ್ಯರ ಉಲ್ಲೇಖದಂತೆ ಇಲ್ಲಿನ ಪೂಜಾ ಪದ್ಧತಿ ಹಾಗೂ ಅರ್ಚಕರು ಕರಾವಳಿ ಜಿಲ್ಲೆಯ ಪಂಚ ದ್ರಾವಿಡ ಬ್ರಾಹ್ಮಣರಿಂದಲೇ ಈಗಲೂ ಪೂಜೆ ಪುರಸ್ಕಾರಗಳು ನಡೆಯುತ್ತಿರುವುದು ವಿಶೇಷ.

ಫೆಬ್ರವರಿ ತಿಂಗಳ 21 ರಿಂದ 24ರವರೆಗೆ ಅಲ್ಲಿ ಬ್ರಹ್ಮಕಲಶೋತ್ಸವ ಹೋಮ, ಪೂಜಾ ವಿಧಿವಿಧಾನಗಳು ನಡೆಯಲಿದೆ. ಮಾಜಿ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರು ಆಗಮ ಪಂಡಿತರೂ ಆದ ಪ್ರಖ್ಯಾತ ವಾಗ್ಮಿ, “ವಿದ್ವಾನ್ ಪಂಜ ಭಾಸ್ಕರ ಭಟ್” ಅವರ ತಂಡ ಈ ಪುಣ್ಯ ಉತ್ಸವವದ ದೇವ ಕಾರ್ಯಗಳನ್ನು ನೆರವೇರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಈಗಾಗಲೇ ಕಳೆದ ಬುಧವಾರ ಪಂಜ ಭಾಸ್ಕರ ಭಟ್ ಅವರನ್ನೊಳಗೊಂಡ ಆರು ಜನರ ಪ್ರಥಮ ತಂಡ ನೇಪಾಳಕ್ಕೆ ತೆರಳಿದ್ದು, ಅಲ್ಲಿನ ಸರಕಾರದ ವತಿಯಿಂದ ದೇವಸ್ಥಾನದ ಆಡಳಿತ ವರ್ಗವು ವಿಮಾನ ನಿಲ್ದಾಣ ದಿಂದಲೇ ಪಂಜ ಭಾಸ್ಕರ್ ಭಟ್ ಅವರ ತಂಡಕ್ಕೆ ಭವ್ಯ ಸ್ವಾಗತ ನೀಡಿ ಬರಮಾಡಿ ಕೊಂಡಿರುತ್ತಾರೆ.

ಹಾಗೂ ಅವರ ಶಿಷ್ಯಂದಿರಾದ ಮಧುಸೂದನ್ ತಂತ್ರಿ ಅವರ ಮುಂದಾಳತ್ವದ 12 ಜನರ ಇನ್ನೊಂದು ತಂಡ ಶನಿವಾರ ರಾತ್ರಿ ನೇಪಾಲಕ್ಕೆ ತೆರಳಿರುತ್ತಾರೆ. ಸನ್ನಿಧಾನದಲ್ಲಿ ಫೆಬ್ರವರಿ 21 ರಿಂದ 24 ರ ವರೆಗೆ ನಡೆಯುವ ಬ್ರಹ್ಮ ಕಲಶಾಭಿಷೇಕ ಕಾರ್ಯಕ್ರಮದಲ್ಲಿ, ಸಾನಿಧ್ಯ ಸಂಕೋಚ, ವಾಸ್ತು ಪೂಜೆ, ವಾಸ್ತು ಬಲಿ. ವಾಸ್ತು ಹೋಮ, ಬಿಂಬ ಸುದ್ದಿ, ಶಾಂತಿ ಪ್ರಾಯಶ್ಚಿತ, ತತ್ವ ಹೋಮ ಅದ್ಭುತ ಶಾಂತಿ ಹಾಗು ಫೆಬ್ರವರಿ 24 ರಂದು ದೇವರಿಗೆ 109 ಕಲಶಾಭಿಷೇಕ ನ್ಯಾಸ ಪೂಜೆ, ಶಾಂತಿ ಹೋಮ ಮತ್ತು ಪ್ರಶನ್ನ ಪೂಜೆ ನಡೆಯಲಿದೆ ಎಂದು ತಿಳಿದುಬಂದಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಕಿದಿಯೂರು ಹೋಟೆಲ್ ನಲ್ಲಿರುವ  ಶ್ರೀ ನಾಗದೇವರ ಸನ್ನಿಧಾನದಲ್ಲಿ 34 ನೇ ವಾರ್ಷಿಕ ಮಹಾಪೂಜೆ 

ಉಡುಪಿ:  ಕಿದಿಯೂರು ಹೋಟೆಲ್ ನಲ್ಲಿರುವ  ಶ್ರೀ ನಾಗದೇವರ ಸನ್ನಿಧಾನದಲ್ಲಿ 34 ನೇ ವಾರ್ಷಿಕ ಮಹಾಪೂಜೆ  ಶುಕ್ರವಾರ ವಿದ್ವಾನ್ ಕಬಿಯಾಡಿ​ ​ಜಯರಾಮ ​ಆಚಾರ್ಯ  ಮಾರ್ಗ ದರ್ಶನದಲ್ಲಿ  ಆಶ್ಲೇಷಾಬಲಿ , ನವಕ ಕಲಶ, ಪ್ರಧಾನ ಹೋಮ...

ಭಾರತೀಯ ಚಾರ್ಟರ್ಡ್ ಅಕೌಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ನೂತನ  ಅಧ್ಯಕ್ಷೆ 

ಉಡುಪಿ: ಭಾರತೀಯ ಚಾರ್ಟರ್ಡ್ ಅಕೌಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ಅವರು 2021-22 ನೇ ಸಾಲಿಗೆ 20ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈ...

ಶ್ರೀ ದುರ್ಗಾ ದೇವಸ್ಥಾನ ಕುಂಜೂರುವಿನಲ್ಲಿ ಮಾರ್ಚ್,1ರಂದು ತ್ರಿಕಾಲ ಪೂಜೆ 

 ದುರ್ಗಾ ಸೇವಾ ಸಮಿತಿ ಕುಂಜೂರು ಇವರು ಆಯೋಜಿಸುವ  ಶ್ರೀ ದುರ್ಗಾ ದೇವಸ್ಥಾನ ಕುಂಜೂರು ಇಲ್ಲಿ ಮಾರ್ಚ್,1 ರಂದು  ತ್ರಿಕಾಲ ಪೂಜೆ ಅನ್ನಸಂತರ್ಪಣೆ ಮುಂತಾದ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ದಿನದ ತ್ರಿಸಂಧ್ಯಾ ಕಾಲಗಳಲ್ಲಿ  ಶ್ರೀ ದುರ್ಗಾ ಮಾತೆಗೆ ವಿಸ್ತೃತ...

ಹೆಸರಾಂತ ಆಯುರ್ವೇದ ವೈದ್ಯ ಜಿ. ಶ್ರೀನಿವಾಸ ಆಚಾರ್ಯ ನಿಧನ

ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ. ಜಿ. ಶ್ರೀನಿವಾಸ ಆಚಾರ್ಯ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ...
error: Content is protected !!