Janardhan Kodavoor/ Team KaravaliXpress
30.6 C
Udupi
Tuesday, August 16, 2022
Sathyanatha Stores Brahmavara

ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಶ್ರೀ ಪೇಜಾವರ ಮಠದ ವತಿಯಿಂದ ಭಕ್ತಿ ಗೌರವಾಭಿನಂದನೆ

ಉಡುಪಿ : ಭಾವೀ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಶ್ರೀ ಪೇಜಾವರ ಮಠದ ವತಿಯಿಂದ ಭಕ್ತಿ ಗೌರವಾಭಿನಂದನೆ ಸೋಮವಾರ ನೀಲಾವರ ಗೋಶಾಲೆಯ ಆವರಣದಲ್ಲಿ ಪೇಜಾವರ ಶಾಖಾ ಮಠದಲ್ಲಿ ನೆರವೇರಿತು.

ಶ್ರೀ ಕೃಷ್ಣಾಪುರ ಮಠದ ಪಟ್ಟದ ದೇವರನ್ನು ಮತ್ತು ಶ್ರೀಗಳವರನ್ನು ಸಾಂಪ್ರದಾಯಿಕ ಗೌರವದೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಶ್ರೀ ಕೃಷ್ಣಾಪುರ ಶ್ರೀಗಳು ಶ್ರೀದೇವರ ಪೂಜೆ ನೆರವೇರಿಸಿ ಭಿಕ್ಷೆ ಸ್ವೀಕರಿಸಿದರು. 

ಬಳಿಕ ಶ್ರೀಗಳವರಿಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಗಳು ಗಂಧಾದ್ಯುಪಚಾರ, ವಿವಿಧ ಮಂಗಲ ದ್ರವ್ಯಗಳನ್ನು ಸಮರ್ಪಿಸಿ ಮಾಲಿಕೆ ಮಂಗಳಾರತಿ ಸಹಿತ ಪುಪಷ್ಪಾಭಿಷೇಕ ನೆರವೇರಿಸಿದರು. ಉಭಯ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!