|| ಶ್ರೀಮನ್ಮೂಲರಾಮೋ ವಿಜಯತೇ || -ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ

ಶ್ರೀ ಪ್ಲವನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಶುದ್ಧ ನವಮಿಯ ದಿನವಾದ ಇಂದು ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ಪ್ರಭು ವಿನ ಅವತಾರದ ಶುಭದಿನ.

ರಮಯತೇ ಇತಿ ರಾಮಃ, ಯಾವ ಪ್ರಭು ಎಲ್ಲರ ಮನಸ್ಸನ್ನು ಆನಂದಗೊಳಿಸುತ್ತಾನೋ ಅವನೇ ” ರಾಮ”. ಅಂತಹ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರಮೂರ್ತಿಯ ಜನ್ಮದಿನವಿಂದು.
ಪ್ರಭು ಶ್ರೀರಾಮ ದೇಶಕ್ಕೊದಗಿರುವ ಕಂಟಕವನ್ನು ನಿವಾರಿಸಲಿ. ಎಲ್ಲರಿಗೂ ಐಶ್ವರ್ಯಾದಿ ಸುಖ ಸಂತೋಷಗಳನ್ನು ಕರುಣಿಸಲಿ.

ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಂ ।
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ||

ವಂದೇsಹಂ ಜಾನಕೀಜಾನಿಂ ಜಗಜ್ಜನ್ಮಾದಿದಂ ವಿಭುಮ್ ।
ಜಗಚ್ಚೇಷ್ಟಕವಾಯ್ವಾದಿಪತಿ೦ ಸರ್ವಜ್ಞಮಚ್ಯುತಮ್ ।।

ಇಂದು ಮತ್ತೊಂದು ವಿಶೇಷ, ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಮಂತ್ರಾಲಯ ಶ್ರೀಮಠದ ಕಲ್ಪವೃಕ್ಷ, ಕಾಮಧೇನು ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಪೂರ್ವಿಕ ಗುರುಗಳಾದ ಶ್ರೀಕವೀಂದ್ರತೀರ್ಥರ ಆರಾಧನೆ.

ಶ್ರೀ ಶ್ರೀಮದ್ರಾಘವೇಂದ್ರತೀರ್ಥರ ಅಂತರ್ಯಾಮಿ ಶ್ರೀಕವೀಂದ್ರತೀರ್ಥ ಗುರುವಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಸೀತಾಪತಿ ಶ್ರೀಮೂಲರಾಚಂದ್ರಮೂರ್ತಿ ಅನುಗ್ರಹವಿರಲಿ.

ವೀಂದ್ರಾರೂಢ ಪದಾಸಕ್ತಂ ರಾಜೇಂದ್ರ ಮುನಿ ಸೇವಿತಮ್ ।
ಶ್ರೀ ಕವೀಂದ್ರ ಮುನಿಂ ವಂದೇ ಭಜತಾಂ ಚಂದ್ರ ಸನ್ನಿಭಮ್ ।।

ಶ್ರೀರಾಮದೇವರ ಅನುಗ್ರಹದಿಂದ:

ಸರ್ವೇವೈ ಸುಖಿನಸ್ಸಂತು ಸರ್ವೇಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ದುಃಖಭಾಗ್ಭವೇತ್ ||

ಕಾಲೇ ವರ್ಷಂತು ಪರ್ಜನ್ಯಃ ಪೃಥಿವೀ ಸಸ್ಯ ಶಾಲಿನೀ |
ದೇಶೋsಯಂ ಕ್ಷೋಭ ರಹಿತಃ ಸಾತ್ವಿಕಾಃ ಸಂತು ನಿರ್ಭಯಾಃ ||

ಶ್ರೀರಾಮ_ಜಯರಾಮ_ಜಯಜಯರಾಮ

ಶ್ರೀಶ ಚರಣಾರಾಧಕ
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.

 
 
 
 
 
 
 
 
 
 
 

Leave a Reply