ತಾಳ ಹಿಡಿದು ಭಜನೆ ಮಾಡಿದ ಶಾಸಕ

ಸಾಮಾನ್ಯವಾಗಿ ಕೆಲವು ನಿತ್ತಜೀವನದ ಶಿಷ್ಟಾಚಾರಗಳು ಹಾಗೂ ಸಾಂಪ್ರದಾಯಿಕ ಆಚರಣೆಗಳಿಗೂ ಗಣ್ಯರು ಜನಪ್ರತಿನಿಧಿಗಳಾದವರಿಗೆ ಸಂಬಂಧವೇ ಇಲ್ಲ ಎಂದು ಭಾವಿಸಿರುತ್ತೇವೆ . ಕೆಲವೊಮ್ಮೆ ಕಾರ್ಯದ ಒತ್ತಡ ದಿಂದಾಗಿಯೂ ಇವುಗಳಿಗಾಗಿ ಸಮಯ ಕೊಡುವ ವ್ಯವಧಾನವೂ ಇಲ್ಲದೇ ಹೋಗಬಹುದು . ಆದರೆ ಇತ್ತೀಚೆಗಷ್ಟೇ ಶಾಸನಸಭೆ ಪ್ರವೇಶಿಸಿದ

*ವಿಧಾನ ಪರಿಷತ್ ಸದಸ್ಯರು ಹಾಗೂ ವನ್ಯಜೀವಿ ಮಂಡಳಿಯ ಸದಸ್ಯರಾದ ಶ್ರೀ ಶಾಂತಾರಾಮ ಸಿದ್ದಿಯವರು ಇಂದು ಶ್ರೀ ಕನ್ನಡಗಲ್ ಗ್ರಾಮದೇವಿ ದೇವಸ್ಥಾನ ಮಾವಳ್ಳಿಗೆ ಭೆಟಿ‌ ನೀಡಿ ತಾಯಿಯ ಕೃಪೆಗೆ ಪಾತ್ರರಾದರು. ಹಾಗೂ ಇದೆ ಸಮಯದಲ್ಲಿ‌ ಗ್ರಾಮಸ್ಥರು ‌ನಡೆಸುತ್ತಿರುವ ಭಜನೆಯಲ್ಲಿ ಸುಮಾರು ಒಂದು ಘಂಟೆ ಭಾಗಿಯಾಗಿ‌ ಸ್ವತಃ ಕೆಲವು ‌ಭಜನೆಗಳನ್ನು‌ ಹೇಳಿ‌ದರು .‌

ಅನೇಕ ವರ್ಷಗಳ ಕಾಲ ವನವಾಸಿ ಕಲ್ಯಾಣ ವಿಭಾಗದಲ್ಲಿ ಸ್ವಯಂಸೇವಕರಾಗಿ ತೊಡಗಿಸಿಕೊಂಡು ಗುಡ್ಡಗಾಡು ಪ್ರದೇಶಗಳಲ್ಲಿ ಅಲೆಯುತ್ತಾ ಅರಣ್ಯವಾಸಿಗಳ ಕಲ್ಯಾಣಕ್ಕಾಗಿ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ನಿರತಾರಾಗಿದ್ದಾಗ ಭಜನೆ, ಚರ್ಚೆ , ಕುಟುಂಬ ಮಿಲನ , ಮೊದಲಾದವುಗಳನ್ನು ನಡೆಸುತ್ತಲೇ ಗುರುತಿಸಿಕೊಂಡ ಸಿದ್ದಿಯವರು ಅದೇ ಹುಮ್ಮಸ್ಸಿನಿಂದಲೇ ನವರಾತ್ರಿ ಭಜನೆಯಲ್ಲಿ ಭಾಗವಹಿಸಿದ್ದು ವಿಶೇಷ.

 
 
 
 
 
 
 
 
 

Leave a Reply