ಮಥುರಾ ಶ್ರೀಕೃಷ್ಣನ ಜನ್ಮಭೂಮಿಲ್ಲಿಯರುವ ಈದ್ಲಾ ಮಸೀದಿಯನ್ನು ತೆರುವುಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.

ಮಥುರಾ: ಮಥುರಾ ಶ್ರೀಕೃಷ್ಣನ ಜನ್ಮಭೂಮಿಲ್ಲಿಯರುವ ಈದ್ಲಾ ಮಸೀದಿಯನ್ನು ತೆರುವುಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.

ಮಥುರಾದ ಕೃಷ್ಣ ಜನ್ಮಭೂಮಿ ಜಮೀನಿನ ಸಂಪೂರ್ಣ 13.37 ಎಕರೆ ಭೂಮಿಯ ಒಡೆತನ ಹಿಂದೂಗಳದ್ದು ಎಂದು ವಕೀಲರಾದ ಹರಿಶಂಕರ್ ಜೈನ್ ಮತ್ತು ವಿಷ್ಣು ಜೈನ್ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು.

ಆದರೆ ನ್ಯಾಯಾಲಯವು 1991 ರ ವಿಶೇಷ ನಿಯಮಾವಳಿ ಕಾಯ್ದೆಯ ಪ್ರಕಾರ ಪ್ರಾರ್ಥನಾ ಮಂದಿರಗಳ ಬದಲಾವಣೆ ಮಾಡುವುದು ಅಸಾಧ್ಯ ಎಂದು ಹೇಳಿದ್ದು ಜಿಲ್ಲಾ ಸಹಾಯಕ ನ್ಯಾಯಾಧೀಶ ಛಾಯ್ಯಾ ಶರ್ಮಾ ಅರ್ಜಿ ವಜಾಗೊಳಿಸಿದ್ದಾರೆ.

ಕೋರ್ಟ್ ಆದೇಶದ ಬೆನ್ನಲೆ ಅ.15ರಂದು ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಶ್ರೀಕೃಷ್ಣ ಜನ್ಮ ಭೂಮಿಗೆ ಅಗತ್ಯವಿರುವ ನಿರ್ಣಯ ತೆಗೆದುಕೊಳ್ಳುಲಾಗುವುದು ಎಂದು ಅಖಾಡ ಪರಿಷತ್ ಅಧ್ಯಕ್ಷ ಮಹಾಂತ್ ನರೇಂದ್ರಗಿರಿ ಹೇಳಿದ್ದಾರೆ

 
 
 
 
 
 
 
 
 
 
 

Leave a Reply