ಶ್ರೀಮದುಡುಪಿ ರಜತಪೀಠಕ್ಕೊಪ್ಪಿದ ನಾಲ್ಕು ಪ್ರಾಚೀನ ಸ್ಕಂದಾಲಯಗಳಲ್ಲಿ ಒಂದಾದ ಶ್ರೀಕ್ಷೇತ್ರ ಮಾಂಗೋಡಿನ ಕುತ್ಪಾಡಿ ಶ್ರೀವಾಸುಕೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ಉಷಃಕಾಲ ಪೂಜೆ, ಪಂಚಾಮೃತ ಸಹಿತ ನವಕಪ್ರಧಾನ ಹೋಮ ಕಲಶಾಭಿಷೇಕ, ಸಾಮೂಹಿಕ ಆಶ್ಲೇಷಾಬಲಿ, ಮಹಾ ಪೂಜಾ ಅನ್ನಾರಾಧನೆಗಳು ನಡೆದವು. ಸಾಯಂಕಾಲ ಸಾಮೂಹಿಕ ಅಪ್ಪಸೇವೆ ಹೂವಿನ ಪೂಜೆ, ನೃತ್ಯಬಲಿ, ರಥೋತ್ಸವ, ಪಲ್ಲಕ್ಕಿಉತ್ಸವ, ಅಷ್ಟಾವಧಾನ, ವಸಂತಪೂಜೆ, ರಂಗಪೂಜಾ ಸಹಿತ ದೀಪಾರಾಧನೆಯು ಭಕ್ತಾದಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಸಾಂಪ್ರದಾಯಿಕವಾಗಿ ನೆರವೇರಿತು.
ಕುತ್ಪಾಡಿ ಶ್ರೀವಾಸುಕೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾವರ್ಧಂತ್ಯುತ್ಸವ

- Advertisement -