ಶ್ರೀ ಕೃಷ್ಣ ಮಠದಲ್ಲಿ ಇಂದಿನಿಂದ ಪಶ್ಚಿಮ ಜಾಗರ ಪೂಜೆ

ಉಡುಪಿ : ಕೃಷ್ಣ ಮಠದಲ್ಲಿ ಮಂಗಳವಾರದಿಂದ ಬೆಳಗ್ಗಿನ ಜಾವ ಸೂರ್ಯೋದಯಕ್ಕೂ ಮುನ್ನ ನಡೆಯುವ ಪಶ್ಚಿಮ ಜಾಗರ ಪೂಜೆ ಪ್ರಾರಂಭ ವಾಗಿದೆ. ಆಶ್ವಯುಜ ಮಾಸದ ಶುಕ್ಷಪಕ್ಷದ ಏಕಾದಶಿ ದಿನವಾದ ಇಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರೀಯ ತೀರ್ಥ ಸ್ವಾಮೀಜಿ ಪೂಜೆ ನೆರವೇರಿಸಿದರು.
ಇಂದಿನಿಂದ ಶ್ರೀಕೃಷ್ಣನಿಗೆ ನಿತ್ಯ ಪೂಜೆಗಳೊಂದಿಗೆ  ಪಶ್ಚಿಮ ಜಾಗರ ಪೂಜೆ ನಡೆಯಲಿದ್ದೂ, ಇನ್ನು ಒಂದು ತಿಂಗಳು ನಿತ್ಯ 15 ಪೂಜೆ ನಡೆದು ಉತ್ಥಾನ ದ್ವಾದಶಿಯ ವರೆಗೆ ನಡೆಯಲಿದೆ . ಪೂಜಾ ಸಮಯದಲ್ಲಿ ಕೃಷ್ಣ ಮಠದ ಗರ್ಭಗುಡಿ ಮುಂಭಾಗ ಮತ್ತು ಸುತ್ತಲಿನ ದಳಿಗಳಲ್ಲಿ ದೀಪಗಳನ್ನು ಹಚ್ಚಲಾಗುತ್ತದೆ. ವಿಶೇಷವಾಗಿ ಸೂರ್ಯ ವಾದ್ಯವನ್ನು ಮೊಳಗಿಸಲಾಗುತ್ತದೆ.
ಮೊದಲಿಗೆ ಪರ್ಯಾಯ ಶ್ರೀಗಳು  ಕೃಷ್ಣನಿಗೆ ಕೂರ್ಮಾರತಿ ಬೆಳಗಿ, ಬಳಿಕ ಕ್ರಮವಾಗಿ ಮುಖ್ಯಪ್ರಾಣ ದೇವರಿಗೆ, ಮಧ್ವಾಚಾರ್ಯರಿಗೆ, ಗರುಡ ದೇವರಿಗೆ ಆರತಿ ಮಾಡುತ್ತಾರೆ. ನಂತರ ಉದ್ವರ್ತನ, ಕಳಶ, ತೀರ್ಥ, ಅಲಂಕಾರ, ಅವಸರ ಸನಕಾದಿ ಪೂಜೆ, ಮಹಾಪೂಜೆ ಜರುಗಲಿದ್ದು, ಸಾಯಂಕಾಲ ಚಾಮರ ಸೇವೆ, ರಾತ್ರಿಪೂಜೆ, ಅಷ್ಟಾವಧಾನ ಪೂಜೆ, ಶಯನೋತ್ಸವ ಎಂದಿನಂತೆ ನಡೆಯಲಿದೆ.
 
 
 
 
 
 
 
 
 
 
 

Leave a Reply