Janardhan Kodavoor/ Team KaravaliXpress
21.6 C
Udupi
Thursday, December 8, 2022
Sathyanatha Stores Brahmavara

ಶ್ರೀಕೃಷ್ಣ ಜನ್ಮಾಷ್ಟಮಿ~ವಿಟ್ಲಪಿಂಡಿ ಉತ್ಸವಕ್ಕೂ ಸಂದಿಗ್ಧತೆ ತಂದಿಟ್ಟ ಕೋವಿಡ್    

ಉಡುಪಿ: ಉಡುಪಿ ಉತ್ಸವಗಳ ಬೀಡು. ನಿರಂತರ ಒಂದಲ್ಲ ಒಂದು ಕಾರ್ಯಕ್ರಮಗಳು ಉಡುಪಿಯಲ್ಲಿ ನಡೆಯುತ್ತಿರುತ್ತವೆ  ಕೋವಿಡ್ ನಿಂದಾಗಿ ಸಾರ್ವಜನಿಕರಿಗೆ  ಕೃಷ್ಣ ದರ್ಶನ ಪಡೆಯಲು ಶ್ರೀಮಠ ಈ​ ತನಕ ​ಅನುಮತಿ ನೀಡಿಲ್ಲ. ಈ ಮಧ್ಯೆ  ಶ್ರೀ ಕೃಷ್ಣಮಠದಲ್ಲಿ ಸೆ. 10 ಮತ್ತು 11ರಂದು ನಡೆಯುವ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವದಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿಲ್ಲ.  ಜನ್ಮಾಷ್ಟಮಿ ಕಾರ್ಯಕ್ರಮ ಮಠದೊಳಗೆ ನಡೆದರೆ, ರಥಬೀದಿಯಲ್ಲಿ ನಡೆಯುವ ವಿಟ್ಲಪಿಂಡಿ (ಶ್ರೀ ಕೃಷ್ಣ ಲೀಲೋತ್ಸವ)ಗೂ ಸರಕಾರದ ಕೋವಿಡ್ ಮಾರ್ಗಸೂಚಿಯಂತೆ ಅವಕಾಶವಿಲ್ಲ. 
ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ​ಜಿ ಜಗದೀಶ್ ​ಅವರು ಈ ಕುರಿತು ಮಾಹಿತಿ ನೀಡಿದ್ದು, ಸೆ. 21ರ ನಂತರ ಮಾತ್ರ 100 ಜನರು ಸೇರಿ ಕಾರ್ಯಕ್ರಮಕ್ಕೆ ಅವಕಾಶ ನೀಡಿ ಕೇಂದ್ರ ಸರಕಾರ ಹೊಸ ಮಾರ್ಗಸೂಚಿ ಹಾಗೂ ಆದೇಶ ಹೊರಡಿ ಸಿದೆ. ಆದರೆ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವ ಸೆ. 10-11ರಂದು ನಡೆಯುವುದರಿಂದ ಹಳೆಯ ಮಾರ್ಗಸೂಚಿಯೇ ಅನ್ವಯಿಸುತ್ತದೆ. ಆದ್ದರಿಂದ ಮಠದಲ್ಲಿ ಉತ್ಸವ ಸಾಂಪ್ರದಾಯಿಕವಾಗಿ ನಡೆಯುತ್ತದೆ ಎಂದು ​ಹೊರತು ಜನ ಸೇರಲು ಅವಕಾಶವಿಲ್ಲ  ಎಂದು ​ಸ್ಪಷ್ಟಪಡಿ​ಸಿದ್ದಾರೆ. 
                                                          ಈ ಭಾರಿ ನೆನೆಪು ಮಾತ್ರ

ಈ ಸಂಬಂಧ ಪರ್ಯಾಯ ಮಠಾಧೀಶರಲ್ಲಿ ಮಾತನಾಡಲಾಗಿದೆ. ಮಠದೊಳಗೆ ಸಾಂಪ್ರದಾಯಿಕವಾಗಿ ಮಠದ ಸಿಬ್ಬಂದಿ ಮಾತ್ರ ಇದ್ದು, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ರಥಬೀದಿಯಲ್ಲಿಯೂ ಮಠ​ಕ್ಕೆ ಸಂಬಂಧ ಪಟ್ಟವರು ಮಾತ್ರ ಮೊಸರು ಕುಡಿಕೆಗಳನ್ನು ಒಡೆಯುತ್ತಾರೆ. ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ ರಥಬೀದಿ ಪ್ರವೇಶವ​ನ್ನೇ  ನಿರ್ಬಂಧಿಸಲಾಗುತ್ತದೆ. ಅಲ್ಲದೇ ವಿಟ್ಲಪಿಂಡಿ ಉತ್ಸವದ ಪ್ರಯುಕ್ತ ಯಾರೂ ಕೂಡ ವೇಷಗಳನ್ನು ಧರಿಸುವಂತಿಲ್ಲ. ಅಷ್ಟಮಿ ವೇಷಗಳಿಗೂ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!