Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಕೊಲ್ಲೂರು ದೇವಳದ ನೂತನ ವ್ಯವಸ್ಥಾಪನಾ ಮಂಡಳಿ ಸದಸ್ಯರ ಆಯ್ಕೆ

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನಕ್ಕೆ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಲು 158 ಅರ್ಜಿಗಳು ಬಂದಿದ್ದವು.  ಅದರಲ್ಲಿ ಒಂಬತ್ತು ಮಂದಿಯನ್ನು ಆಯ್ಕೆ ಮಾಡಿ ಆದೇಶ ನೀಡಲಾಗಿದೆ.

ವ್ಯವಸ್ಥಾಪನ ಸಮಿತಿಗೆ ಪಾಳಿಯಲ್ಲಿರುವ ಪ್ರಧಾನ ಅರ್ಚಕರಾದ ಕೊಲ್ಲೂರು ಬಾಳೆಗದ್ದೆ ಮನೆ ಡಾ. ಕೆ. ರಾಮಚಂದ್ರ ಅಡಿಗ, ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಗೋಪಾಲಕೃಷ್ಣ ರಾಮನಗರ ಸೇನಾಪುರ, ಮಹಿಳಾ ಮೀಸಲಾತಿಯಲ್ಲಿ ರತ್ನಾ ರಮೇಶ್‌ ಕುಂದರ್‌ ಕೊಲ್ಲೂರು, ಸಂಧ್ಯಾ ರಮೇಶ್‌ ಮಚ್ಚಟ್ಟು, ಸಾಮಾನ್ಯ ವರ್ಗದಿಂದ ಕೆರಾಡಿ ಚಂದ್ರಶೇಖರ ಶೆಟ್ಟಿ, ಗಣೇಶ್‌ ಕಿಣಿ ಬೆಳ್ವೆ, ಡಾ.ಅತುಲ್‌ಕುಮಾರ ಶೆಟ್ಟಿ ಚಿತ್ತೂರು, ಜಯಾನಂದ ಹೋಬಳಿದಾರ ಬೈಂದೂರು ಮತ್ತು ಶೇಖರ ಪೂಜಾರಿ ಕಾರ್ಕಡ ಆಯ್ಕೆಯಾಗಿದ್ದಾರೆ.

ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮೂರು ವರ್ಷಗಳ ಅವಧಿಯದ್ದಾಗಿದೆ. ಈ ವರ್ಷ 158 ಅರ್ಜಿಗಳು ಬಂದಿದ್ದು ಅರ್ಜಿದಾರರ ಅರ್ಹತೆ, ವಿಳಾಸ ಹಾಗೂ ಪೂರ್ವಾಪರ ವಿವರ ಮೊದಲಾದವುಗಳನ್ನು  ದೇವಸ್ಥಾನದ ಸುವ್ಯವಸ್ಥಿತ ಆಡಳಿತದ ಹಿತ ದೃಷ್ಟಿಯಿಂದ ಪರಿಶೀಲಿಸಿ ನಂತರ ನೂತನ ಸಮಿತಿ ಸದಸ್ಯರ ಆಯ್ಕೆ ಮಾಡಲಾಗಿದೆ.

ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವ್ಯವಸ್ಥಾಪನ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿರುತ್ತಾರೆ. ನೂತನ ಸದಸ್ಯರು ಪ್ರಥಮ ಸಭೆಯಲ್ಲಿ ತಮ್ಮಲ್ಲಿಯೇ ಒಬ್ಬರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಕಳಿಸಿಕೊಡುವ ಮೂಲಕ ತಿಳಿಸಬೇಕು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!