ಕೊಲ್ಲೂರು ಮುಕಾಂಬಿಕೆಗೆ ಮುಸ್ಲಿಂ ಕುಟುಂಬದಿಂದ ಸಲಾಂ

ಕುಂದಾಪುರ : ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಬಳ್ಳಾರಿ ಮೂಲದ ಮುಸ್ಲಿಂ ಕುಟುಂಬವೊಂದು ಪ್ರತಿ ವರ್ಷ ಚಂಡಿಕಾ ಹೋಮ ನೆರೆವೇರಿಸಿಕೊಂಡು ಬಂದಿದ್ದು ಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿದೆ.

ಬಳ್ಳಾರಿಯಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಎಚ್‌. ಇಬ್ರಾಹಿಂ, ಸಾಜುದ್ದೀನ್‌ ಹಾಗೂ ಜರೀನಾ ಅವರ ಕುಟುಂಬಸ್ಥರು ಕಳೆದ ಹಲವು ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಬಂದು ತಾಯಿ ಮೂಕಾಂಬಿಕೆಯ ದರ್ಶನ ಪಡೆದು, ವಿಶೇಷ ಪೂಜೆ ಹಾಗೂ ಚಂಡಿಕಾಹೋಮ ನಡೆಸುತ್ತಿದ್ದಾರೆ. ಈಗ ಈ ಕುಟುಂಬದ ಕಿರಿಯ ಪುತ್ರ ಮನ್ಸೂರ್‌ ಹಾಗೂ ಪತ್ನಿಯೂ ವರ್ಷಕ್ಕೊಮ್ಮೆ ಚಂಡಿಕಾಹೋಮ ಮಾಡಿಸುತ್ತಿದ್ದು, ಧರ್ಮ ಸಾಮರಸ್ಯಕ್ಕೆ ನಿದರ್ಶನವಾಗಿದೆ. 

ಎಲ್ಲಾ ದೇವರು ಒಂದೇ ಎನ್ನುವ ಮನ್ಸೂರ್‌, ಮೂಕಾಂಬಿಕೆಯ ಸನ್ನಿಧಿಯಲ್ಲಿ ಪೂಜೆ, ಚಂಡಿಕಾಹೋಮ ನಡೆಸುವುದರಿಂದ ನಮಗೆ ಆತ್ಮಸಂತೃಪ್ತಿ ಲಭಿಸುತ್ತದೆ. ಅಮ್ಮನ ಅನುಗ್ರಹದಿಂದ ನಾವು ಸಂತೃಪ್ತಿಯ ಜೀವನ ನಡೆಸುತ್ತಿದ್ದೇವೆ. ಈ ಕ್ಷೇತ್ರದಲ್ಲಿ ವಿಶೇಷವಾದ ಶಕ್ತಿಯಿದೆ ಎಂದು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply