ಕೊಡವೂರು ದೇವಳದಲ್ಲಿ ಸಂಭ್ರಮದಿಂದ ಜರುಗಿದ ರಾಶಿ ಪೂಜೆ   

ಉಡುಪಿ: ಕೊಡವೂರು ಮಹತೋಬಾರ ಶಂಕರನಾರಾಯಣ ದೇವಳದಲ್ಲಿ ರಾಶಿ ಪೂಜೆಯು ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆ ಮೂಲಕ ವೈಭವದಿಂದ ಜರುಗಿತು.

ದೇವಳದ ತಂತ್ರಿ ವೇ|ಮೂ|ಪುತ್ತೂರು ಹಯವದನ ತಂತ್ರಿಗಳು ಹಾಗೂ ತಂಡದವರ ನೇತೃತ್ವದಲ್ಲಿ ಗುರುವಾರ ಸೂರ್ಯೋದಯದಿಂದ ಶುಕ್ರವಾರ ಸೂರ್ಯೋದಯದವರೆಗೆ 24 ಗಂಟೆ ಪೂಜಾ ಮಹೋತ್ಸವವು ಜರುಗಿತು. ದೇವರಿಗೆ ವಾದ್ಯ, ಸಂಗೀತ, ಭರತನಾಟ್ಯ ಯಕ್ಷಗಾನ, ಭಜನೆ, ಕೀರ್ತನೆ, ಅಷ್ಟಾವಧಾನ ಸೇವೆಯು ಸಂಪನ್ನಗೊಂಡಿತು.

 

ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ಮಧ್ಯಾಹ್ನ ಮತ್ತು ರಾತ್ರಿ 18 ಸಾವಿರ ಭಕ್ತರು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಈ 24 ಗಂಟೆಗಳು ಆರೂರು ಶ್ರೀ ವಿಷ್ಣುಮೂರ್ತಿ ತಂಡದಿಂದ ದೇವಳದ ಒಳಾಂಗಣದಲ್ಲಿ ಸಂಕೀರ್ತನೆ ನಡೆಯಿತು.

ರಾತ್ರಿಯ ಧಾರ್ಮಿಕ ಸಭೆಯಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಶ್ರೀಕಾಂತ ಬಾಯರಿ ಪ್ರವಚನ ಆಧಾರಿತ ಲೇಖಕಿ ಪೂರ್ಣಿಮಾ ಜನಾರ್ದನ್ ರಚಿಸಿರುವ ರಾಶಿಪೂಜೆಯ ಕುರಿತಾದ ಪುಸ್ತಕವನ್ನು ಬಿಡುಗಡೆಗೊಳಿಸಿ ಆಶೀರ್ವಚಿಸಿದರು.

ವಿಶೇಷವಾಗಿ 12 ಹರಿವಾಣದಲ್ಲಿ 12 ರಾಶಿಗಳ ಉಬ್ಬು ಚಿತ್ರ ರಚಿಸಿ ಶಂಕರನಾರಾಯಣ ದೇವರನ್ನು ಅಲಂಕರ ಮಾಡಲಾಗಿತ್ತು.

 

ನೃತ್ಯಸೇವೆ ಭರತನಾಟ್ಯದಲ್ಲಿ ಸರ್ವೇಶ್ ಭಟ್ ಕರಂಬಳ್ಳಿ, ಮಾನಸಿ ಕೆ ಮಲ್ಪೆ, ಯಶಸ್ವಿ ಸುಬ್ರಹ್ಮಣ್ಯನಗರ, ವೈಷ್ಣವಿ ವಿಜಯ ಕೊಡವೂರು, ಸಂಜನ ಸುವರ್ಣ ಕೆಮ್ಮಣ್ಣು, ಸಂಜನಾ ಸನೀಲ್ ಗರಡಿಮಜಲು, ನೃತ್ಯನಿಕೇತನ ಕೊಡವೂರು, ಲಕ್ಷ್ಮೀ ಗುರುರಾಜ್, ಯಕ್ಷಗಾನದಲ್ಲಿ ವರಾಲಿ ಪ್ರಕಾಶ್ ಮತ್ತು ತಂಡ, ವಿನುತಾ ಅಜ್ಜರಕಾಡು, ಸಿರಿ ಅಂಬಲಪಾಡಿ, ಮೋಹಿನಿಯಟ್ಟಂನಲ್ಲಿ ಭಾವನ ಕೆರೆಮಠ ಪಾಲ್ಗೊಂಡರು. ಸಂಗೀತ ಸೇವೆಯಲ್ಲಿ ಗೋವಿಂದ ಐತಾಳ, ರಾಮ ಐತಾಳ್, ದರ್ಶನ್ ಎಸ್ ಜತ್ತನ್, ಸೌಮ್ಯ ಶೆಟ್ಟಿ ಸಂತೆಕಟ್ಟೆ, ಪಾಡಿಗಾರು ಲಕ್ಷ್ಮಿ ನಾರಾಯಣ ಉಪಾಧ್ಯ, ಉಷಾ ಹೆಬ್ಬಾರ ಮತ್ತು ತಂಡ, ದುರ್ಗಾ ಭಜನಾ ಮಂಡಳಿ ಕೊಡವೂರು, ಅನೀಷ್ ಸನೀಲ್, ಕಾವ್ಯ ಸೀತಾರಾಮ, ಮಹಾಲಕ್ಷ್ಮೀ ಸಂಘ, ಕಿರಣ್ ಕುಮಾರ್ ಕೊಡವೂರು, ಸುಶಾಂತ ಶಾಲ್ಮಲಿ, ಭಾರತೀ ಸುಬ್ರಹ್ಮಣ್ಯಂ ಭಾಗವಹಿಸಿದರು. ಮಧ್ಯಾಹ್ನ ರೋಹಿತ್ ಮಲ್ಪೆ ಮತ್ತು ಬಳಗದವರಿಂದ ಭಾವಯಾನ ಸುಗುಮ ಸಂಗೀತ, ರಾತ್ರಿ ಹಟ್ಟಿಯಂಗಡಿ ಮೇಳದವರಿಂದ ಕಾಲ ಮಿತಿ ಯಕ್ಷಗಾನ ಬಯಲಾಟ ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಸದಸ್ಯರಾದ ಜನಾರ್ದನ ಕೊಡವೂರು, ಅಡಿಗ ಕೃಷ್ಣಮೂರ್ತಿ ಭಟ್, ಭಾಸ್ಕರ ಪಾಲನ್ ಬಾಚನಬೈಲು, ರಾಜ ಎ ಸೇರಿಗಾರ್, ಚಂದ್ರಕಾಂತ್ ಕಾನಂಗಿ, ಬಾಬ ಕೆ ಸುಧಾ ಎನ್ ಶೆಟ್ಟಿ, ಬೇಬಿ ಎಸ್ ಮೆಂಡನ್, ರಾಶಿ ಪೂಜಾ ಸೇವಾ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಗೌರಾವಾಧ್ಯಕ್ಷ ಆನಂದ ಪಿ ಸುವರ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

 

 
 
 
 
 
 
 
 
 

Leave a Reply